Saturday, June 14, 2025
HomeUncategorizedರಾಜಾಂಗಣದಲ್ಲಿ 'ನರಸಿಂಹ ಜಯಂತಿ' ಆಚರಣೆ

ರಾಜಾಂಗಣದಲ್ಲಿ ‘ನರಸಿಂಹ ಜಯಂತಿ’ ಆಚರಣೆ

‘ನರಸಿಂಹ ಜಯಂತಿ’ಯ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ವಿದುಷಿ ಉಷಾ ಹೆಬ್ಬಾರ್ ಅವರ ನೇತೃತ್ವದಲ್ಲಿ ಉಡುಪಿಯ ರಾಜಾoಗಣದಲ್ಲಿ ನಡೆದ ಭಜನೆ, ಯಕ್ಷಗಾನ, ಹರಿಕಥೆ, ನೃತ್ಯ ರೂಪಕ, ಕುಣಿತ ಭಜನೆ, ಸೆಮಿಕ್ಲಾಸಿಕಲ್ ನೃತ್ಯ ಮುಂತಾದ ವೈವಿಧ್ಯಮಯ ಕಾರ್ಯಕ್ರಮಗಳಿಗೆ ಮಠದ ಸಾಂಸ್ಕೃತಿಕ ಕಾರ್ಯದರ್ಶಿ ರಮೇಶ್ ಭಟ್ ಅವರು ಜ್ಯೋತಿ ಬೆಳಗಿಸಿ ಚಾಲನೆ ನೀಡಿದರು.

ಮಠದ ದಿವಾನ ನಾಗರಾಜ ಆಚಾರ್ಯ ಅವರು ನರಸಿಂಹ ಜಯಂತಿ ಆಚರಣೆಯ ಮಹತ್ವವನ್ನು ವಿವರಿಸಿ ಶುಭಾಸಂಸನೆಗೈದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕಿ ಹಾಗೂ ಭಜನಾ ತರಬೇತುದಾರೆ ಶ್ರೀಮತಿ ಉಷಾ ಹೆಬ್ಬಾರ್, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ, ಮಾಜಿ ನಗರಸಭಾ ಸದಸ್ಯ ನರಸಿಂಹ ನಾಯಕ್ ಮಣಿಪಾಲ, ಮಠದ ಪ್ರಮುಖರಾದ ರಘುಪತಿ ರಾವ್, ಕಲಾವಿದರಾದ ರಾಮಕೃಷ್ಣ ಕೊಡಂಚ, ಕಾರ್ತಿಕ್ ಇನ್ನಂಜೆ, ಮುರಳಿ, ಕಾವ್ಯ ಹೆಬ್ಬಾರ್, ಕೌಶಿಕ್ ಹೆಬ್ಬಾರ್, ನಿತ್ಯಾನಂದ ನಾಯಕ್ ಹಾಗೂ ಭಜನಾ ಮಂಡಳಿಗಳ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular