
ಸಂಸ್ಕಾರಯುತ ಶಿಕ್ಷಣದಿಂದ ಉಜ್ವಲ ಭವಿಷ್ಯ-ಶ್ರೀಪತಿ ಭಟ್
ಮೂಡುಬಿದಿರೆ: ಭಾರತವು ಅತೀ ಹೆಚ್ಚು ಯುವ ಸಮೂಹವನ್ನು ಹೊಂದಿರುವ ದೇಶವಾಗಿದ್ದು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಅವರ ಜವಾಬ್ದಾರಿ ಹೆಚ್ಚಿ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಹಿರಿಯ ಲಯನ್ಸ್ ಸದಸ್ಯ, ಧನಲಕ್ಷ್ಮಿ ಸಮೂಹ ಸಂಸ್ಥೆಗಳ ಪ್ರವರ್ತಕ ಕೆ. ಶ್ರೀಪತಿ ಭಟ್ ನುಡಿದರು.
ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿನ ಕೀರ್ತಿನಗರದ ಲಯನ್ಸ್ ಪಾರ್ಕ್ನ ಹರಿಭವ ಸಭಾಭವನದಲ್ಲಿ ನ. 15ರಂದು ಮಕ್ಕಳ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಪೋಷಿಸುವ ಜೊತೆಗೆ ಐಕ್ಯತೆ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಕ್ಲಬ್ ಅಧ್ಯಕ್ಷ ರಿಚರ್ಡ್ ಕರ್ಡೋಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ಕಾರ್ಯದರ್ಶಿ ಹರ್ಷ, ಕೊಶಾಧಿಕಾರಿ ಅರುಣ್ ಡಿಸಿಲ್ವ, ಸ್ಪರ್ಧಾ ಸಂಯೋಜಕರಾದ ವಿನೋದ್ ಡೇಸಾ, ಹರೀಶ್ ತಂತ್ರಿ, ನಿಕಟಪೂರ್ವ ಅಧ್ಯಕ್ಷ ಶಿವಪ್ರಸಾದ್ ಹೆಗ್ಡೆ, ಪದಾಧಿಕಾರಿಗಳಾದ ಆಲ್ವಿನ್ ಮಿನೇಜಸ್, ಜೊಸ್ಸಿ ಮಿನೇಜಸ್, ಬೊನವೆಂಚರ್ ಮಿನೇಜಸ್, ಆಂಟನಿ ಡಿಸೋಜ ಉಪಸ್ಥಿತರಿದ್ದರು.
