ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನೆ

0
78


ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ನ ಉದ್ಘಾಟನಾ ಸಮಾರಂಭ ಬಪ್ಪನಾಡು ಬಡಗುಹಿತ್ಲು ಬಳಿಯ ಕಾಂತು ಸೇವೆಗಾರ ಧರ್ಮ ಚಾವಡಿಯ ವೇದಿಯಲ್ಲಿ ನಡೆಯಿತು.


ಕಾಂತು ಸೇವೆಗಾರ ಧರ್ಮ ಚಾವಡಿ ನೂತನ ಟ್ರಸ್ಟ್ ಉದ್ಘಾಟಿಸಿ ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾವಂತ ಅರಸರು ಮಾತನಾಡಿ ಮೂಲ್ಕಿ ಅರಮನೆ ಮತ್ತು ಕಾಂತು ಸೇವೆಗಾರ ಮನೆತನವು ಹಿಂದಿನಿAದಲೂ ಸಂಬAದವನ್ನು ಹೊಂದಿದೆ ಕಾಂತು ಸೇವೆಗಾರರ ಮನೆತನದ ಕಂಬಳದ ಕೋಣಗಳು ಅರಸು ಕಂಬಳದ ಗದ್ದೆಗೆ ಮೊದಲು ಇಳಿಯುವಂತಹ ಸಂಪ್ರದಾಯವಿತ್ತು, ಅದು ಈಗಲೂ ಮುಂದುವರೆದು ಬಂದಿದೆ ಎಂದು ಹೇಳಿದರು.
ಇಲ್ಲಿ ಉಪಸ್ಥಿತರಿದ್ದ ಶಿವಗಿರಿ ಮಠದ ತಂತ್ರಿಗಳಾದ ಮನೋಜ್ ಅವರು ಕಾಂತು ಸೇವೆಗಾರ ಟ್ರಸ್ಟಿನ ಎಲ್ಲಾ ಕೆಲಸಗಳು ಯಶಸ್ವಿಯಾಗಿ ನಡೆಯಲಿ ಎಂದು ಆಶೀರ್ವಚನ ನೀಡಿದರು.


ಮುಖ್ಯ ಅತಿಥಿಯಾಗಿ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ ಸುಮಾರು ೮೦೦ವರ್ಷಗಳ ಇತಿಹಾಸವಿರುವ ಕಾಂತು ಸೇವೆಗಾರ ಕುಟುಂಬವು ಮೂಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಸಂಬAಧ ಹೊಂದಿ ಈಗ ಈ ದೈವದ ಜೀರ್ಣೋದ್ಧಾರವನ್ನು ಮಾಡಲು ಟ್ರಸ್ಟ್ ವೊಂದನ್ನು ಸ್ಥಾಪಿಸಿ ಅವನ ಉದ್ದೇಶಗಳೆಲ್ಲ ಮುಂದಿನ ದಿನಗಳಲ್ಲಿ ನಡೆಯಲೆಂದು ಹೇಳಿದರು. ಇದಕ್ಕೆ ಬಿಲ್ಲವ ಸಮಾಜದ ದೈವಭಕ್ತರು ಸಹಕಾರ ನೀಡಿ ಎಲ್ಲಾ ಕೆಲಸವು ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ನ ಅಧ್ಯಕ್ಷ ವಾಸು ಪೂಜಾರಿ ಕೊಲಕಾಡಿ ವಹಿಸಿದರು.
ವೇದಿಕೆಯಲ್ಲಿ ಟ್ರಸ್ಟ್ನ ಗೌರವಾಧ್ಯಕ್ಷ ಅರ್ಚಕ ಮಹೇಶ್ ಶಾಂತಿ, ಮುಂಬೈ ಭಾರತ್ ಕೋ-ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ ಜೆ.ಸುವರ್ಣ, ಬ್ರಹ್ಮಶ್ರೀ ನಾರಾಯಣಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್, ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಉದ್ಘಾಟನಾ ಸಮಾರಂಭ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸತೀಶ್ ಅಂಚನ್, ಬಂಕಿ ನಾಯಕರು ಹಳೆಯಂಗಡಿ, ಅಂತಪ್ಪ ನಾಯಗರು ಉಳೆಪಾಡಿ ಗುಡ್ಡೆಸಾನ, ನಮ್ಮ ಕುಡ್ಲ ವಾಹಿನಿಯ ಲೀಲಾಕ್ಷ ಕರ್ಕೇರ, ತೋಕೂರು ಶ್ರೀ ಸುಬ್ರಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗುರುರಾಜ್ ಎಸ್ ಪೂಜಾರಿ, ಉದ್ಯಮಿಗಳಾದ ಜಗನ್ನಾಥ್ ಕೋಟ್ಯಾನ್ ಕಟ್ಟದಂಗಡಿ, ಮೋಹನ್ ದಾಸ್ ಪೂಜಾರಿ ಮುಂಬೈ, ಕಕ್ವ ಕೊಲಕಾಡಿ ಬರ್ಕೆ ಸಾನದ ಮನೆಯ ವಿಶಾಲ್ ಎಲ್.ಸಾಲ್ಯಾನ್, ಕಾಂತು ಸೇವೆಗಾರ ಕುಟುಂಬದ ಮುಖ್ಯಸ್ಥ ಪ್ರಕಾಶ್ ಸಾಲ್ಯಾನ್, ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೂಲ್ಕಿ ಸೀಮೆ ಅರಸು ಕಂಬಳದಲ್ಲಿ ಕಾಂತು ಸೇವೆಗಾರ ಕುಟುಂಬಕ್ಕೆ ಮಾನ್ಯತೆ ನೀಡಲು ಸೀಮೆಯ ಅರಸರಿಗೆ ಮನವಿ ಸಲ್ಲಿಸಲಾಯಿತು. ವಾಸು ಪೂಜಾರಿ ಚಿತ್ರಾಪು ವಂದನಾರ್ಪಣೆ ಮಾಡಿದರು. ಭಾಸ್ಕರ್ ಅಮೀನ್ ತೋಕೂರು ಹಾಗೂ ಜನಾರ್ದನ ಬಂಗೇರ ಕೆ.ಎಸ್.ರಾವ್ ನಗರ ನಿರೂಪಿಸಿದರು.

LEAVE A REPLY

Please enter your comment!
Please enter your name here