ಕೌಶಲ್ಯ ತರಬೇತಿ ಹಾಗೂ ಬ್ಯಾಂಕ್ ಸೌಲಭ್ಯಗಳ ಮಾಹಿತಿ ಉದ್ಘಾಟಣೆ

0
13

ಬೆಳ್ತಂಗಡಿ : ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು, ಭಾರತೀಯ ವಿಕಾಸ ಟ್ರಸ್ಟ್ .ಮಣಿಪಾಲ ಹಾಗೂ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ಕೌಶಲ್ಯ ತರಬೇತಿ ಹಾಗೂ ಬ್ಯಾಂಕ್ ಸೌಲಭ್ಯಗಳ ಮಾಹಿತಿ ಹಾಗೂ ಅರಿ ವರ್ಕ್ ಎಂಬ್ರಾಯಿಡಿಂಗ್ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಆ.7 ರಂದು ಬೆಳ್ತಂಗಡಿ ಸುವರ್ಣ ಅರ್ಕೇಡ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕರಾದ ಜ್ಯೋತಿರಾಜ್ ದೀಪ ಬೆಳಗಿಸಿ ಉದ್ಘಾಟಿಸಿ ಮಹಿಳೆಯರು ಸ್ವ ಉದ್ಯೋಗವನ್ನು ಕಳಿತು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿ ಭಾರತೀಯ ವಿಕಾಸ ಟ್ರಸ್ಟ್ ನ ಕಾರ್ಯಕ್ರಮಗಳ ವ್ಯವಸ್ಥಾಪಕ ಜೀವನ್ ಕೊಲ್ಯ ಶುಭವನ್ನು ಹಾರೈಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟೈಲರ್ಸ್ ಅಸೋಸಿಯೇಷನ್ ವಲಯ ಸಮಿತಿ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್ ವಹಿಸಿ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ದೀಕ್ಷಾ ಕಲ್ಲೇರಿ, ಎಸ್ ವಿ ಫ್ಯಾಮಿಲಿ ಬ್ಯುಟೀಶನ್ ಮಾಲಕಿ ಶಾಂತಾ ಬಂಗೇರ ,ವಸಂತ ಟೈಲರ್ ಸ್ವಾತಿ,ಮೋಹನ್ ಶ್ವತ್ತಿ6,ಹರೀಶ್ ಜಿ.ವಿ.ಮುಂತಾದವರು ಹಾಗೂ ಆರಿ ವರ್ಕ್ ತರಬೇತಿ ಪಡೆಯಲು ಬಂದಿರುವ 30ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.

ಸದಾನಂದ ಸಾಲಿಯಾನ್ ಬಳಂಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.