ಸುಬ್ರಹ್ಮಣ್ಯ ಸಹಕಾರ ಸಂಘದ 19 ನೇ ಶಾಖೆ ಉದ್ಘಾಟನೆ

0
34


ವರದಿ ರಾಯಿ ರಾಜ ಕುಮಾರ
ಮಂಗಳೂರು ಬಿಜೈ ಯ ಸುಬ್ರಹ್ಮಣ್ಯ ಸಭೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸುಬ್ರಹ್ಮಣ್ಯ ಸಹಕಾರ ಸಂಘದ 19 ನೇ ಶಾಖೆಯು ಪಡುಬಿದಿರೆಯಲ್ಲಿ ನವೆಂಬರ್ 19ರಂದು ಉದ್ಘಾಟನೆಗೊಂಡಿತು. ಪಡುಬಿದಿರೆಯ ಜಂಕ್ಷನ್ ನಲ್ಲಿರುವ ಧ್ರುವ ಸಂಕೀರ್ಣ ದಲ್ಲಿ ವಿವಿಧ ಪೂಜಾ ವಿಧಿಗಳೊಂದಿಗೆ ಶಾಖೆಯ ಉದ್ಘಾಟನೆ ನೆರವೇರಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರುಣ್ ರಾವ್ ಬೆಳ್ಳೆ, ಉಪಾಧ್ಯಕ್ಷ ಎಸ್ಎನ್ ನಟರಾಜ್, ಹೆಚ್ಚಿನ ನಿರ್ದೇಶಕರುಗಳು, ಕಾರ್ಯನಿರ್ವಹಣಾಧಿಕಾರಿ ಸಾಯಿಪ್ರಸಾದ್ ಎಂ, ಶಾಖಾ ವ್ಯವಸ್ಥಾಪಕ ಪ್ರೇಮ್ ಕುಮಾರ್, ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
.

LEAVE A REPLY

Please enter your comment!
Please enter your name here