ಕಾರ್ಕಳ ರೋಟರಿಯಿಂದ ಸ್ವಾತಂತ್ರೋತ್ಸವ

0
138

ರೋಟರಿ ಕ್ಲಬ್ ಕಾರ್ಕಳ ಇದರ ವತಿಯಿಂದ 79ನೇ ಸ್ವಾತಂತ್ರ್ಯೋತ್ಸವವು ಕಾರ್ಕಳ ಸ್ವರಾಜ್ಯ ಮೈದಾನದ ಬಳಿಯ ರೋಟರಿ ಪಾರ್ಕ್ ನಲ್ಲಿ ನಡೆಯಿತು. ಹಿರಿಯ ರೊಟೇರಿಯನ್ ಸುವರ್ಣ ನಾಯಕ್ ರಾಷ್ಟ್ರ ಧ್ವಜವನ್ನು ಅರಳಿಸಿದರು. ಮುಖ್ಯ ಅತಿಥಿ ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ ಆದಿರಾಜ್ ಸ್ವಾತಂತ್ರೋತ್ಸವದ ಸಂದೇಶವನ್ನು ನೀಡಿದರು.

ವಲಯ ಸೇನಾನಿ ಜಾನ್ ಆರ್ ಡಿ’ಸಿಲ್ವ,ಆನ್ಸ್ ಕ್ಲಬ್ ಅಧ್ಯಕ್ಷೆ ಜಯಂತಿ ನಾಯಕ್ ರೋಟರ್ಯಾಕ್ಟ್ ಕಾರ್ಯದರ್ಶಿ ಅನ್ವಯ್ ಮತ್ತು ರೋಟರಿ ಸದಸ್ಯರು ಉಪಸ್ಥಿತರಿದ್ದರು. ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ವಸಂತ್ ಎಂ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.

LEAVE A REPLY

Please enter your comment!
Please enter your name here