ರೋಟರಿ ಕ್ಲಬ್ ಕಾರ್ಕಳ; ಕೆ.ಎಂ.ಇ.ಎಸ್. ಇಂಟರ್ಯಾಕ್ಟ್ ಕ್ಲಬ್ ಪದಗ್ರಹಣ

0
219

ಕಾರ್ಕಳ: ಕೆ.ಎಂ.ಇ.ಎಸ್. ವಿದ್ಯಾಸಂಸ್ಥೆಗಳ ಪ್ರೌಢಶಾಲಾ ವಿಭಾಗದ ಇಂಟರಾಕ್ಟ್ ಕ್ಲಬ್ ನ ಪದಗ್ರಹಣ ಕಾರ್ಯಕ್ರಮವು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು.

ಇಂಟರಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ಮತ್ತು ಕಾರ್ಯದರ್ಶಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಸೇವೆಯೇ ರೋಟರಿಯ ಮೂಲ ಉದ್ದೇಶವಾಗಿದೆ. ಸೇವೆ ಮಾಡುವುದರಿಂದ ಸಿಗುವ ಸಂತೃಪ್ತ ಭಾವನೆ ಬೇರೆ ಯಾವುದರಿಂದಲೂ ಸಿಗಲಾರದು. ವಿದ್ಯಾರ್ಥಿಗಳು ಎಳವೆಯಲ್ಲಿಯೇ ಪರಿಸರ ಸಂರಕ್ಷಣೆ ನಾಯಕ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇುಕು ಎಂದರು.

ಅಧ್ಯಕ್ಷತೆ ವಹಿಸಿದ ದಿತ್ಯಾ ಶೆಟ್ಟಿ ತನ್ನ ನೂತನ ತಂಡವನ್ನು ಪರಿಚಯಿಸಿ ವಾರ್ಷಿಕ ಯೋಜನೆಯನ್ನು ಪ್ರಸ್ತುತ ಪಡಿಸಿದರು. ಇಂಟರಾಕ್ಟ್ ಕ್ಲಬ್ಬಿನ ಚೇರ್ಮನ್ ಬಾಲಕೃಷ್ಣ ದೇವಾಡಿಗ ಇಂಟರಾಕ್ಟ್ ಕ್ಲಬ್ಬಿನ ಬಗ್ಗೆ ಮಾಹಿತಿ ನೀಡಿದರು. ಜ್ಯೋತಿ ಪದ್ಮನಾಭ ಇಂಟರ್ಯಾಕ್ಟ್ ಕಬ್ಬಿನ ವತಿಯಿಂದ ಮಾಡಬಹುದಾದ ಸೇವಾ ಕಾರ್ಯಗಳ ಬಗ್ಗೆ ವಿವರಿಸಿದರು . ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಇಂಟರ್ಯಾಕ್ಟ್ ಕ್ಲಬ್ಬಿನ ಕಾರ್ಯದರ್ಶಿ ಆಷ್ಪಿಯಾ,ಪ್ರಾಂಶುಪಾಲ ಬಾಲಕೃಷ್ಣ ರಾವ್, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಲೋಲಿಟಾ ಡಿ’ಸಿಲ್ವಾ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರೋಟರಿ ಸದಸ್ಯರಾದ ವಸಂತ್ ಎಂ, ಶೇಖರ್ ಹೆಚ್. ಅರುಣ್ ಶೆಟ್ಟಿ, ಜೆರಾಲ್ಡ್ ಕುಟಿನ್ಹೊ, ಚೇತನ್ ಕುಮಾರ್, ಶಶಿಧರ್, ಕಾರ್ಯದರ್ಶಿ ಚೇತನ್ ನಾಯಕ್ ಮತ್ತು ರೋಟ್ರಾಕ್ಟರ್ ಆದಿತ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸ್ವಾಗತಿಸಿದರು. ಶಿಕ್ಷಕಿ ಶ್ರುತಿ ಕಾರ್ಯಕ್ರಮ ನಿರೂಪಿಸಿದರು. ದಿಶಾ  ವಂದಿಸಿದರು.

LEAVE A REPLY

Please enter your comment!
Please enter your name here