ಹೆಬ್ರಿ ತಾಲ್ಲೂಕಿನ ಶಿವಪುರ ಕೆಳಖಜಾನೆಯ ಶ್ರೀರಾಮ ಫ್ರೆಂಡ್ಸ್ ವತಿಯಿಂದ ಪ್ರಥಮ ವರ್ಷದಲ್ಲಿ ೭೯ನೇ ಸ್ವಾತಂತ್ರ್ಯೋತ್ಸವ ಶುಕ್ರವಾರ ನಡೆಯಿತು. ಶಿವಪುರ ಗ್ರಾಮ ಪಂಚಾಯಿತಿ ಸದಸ್ಯ ಮಯೂರ ಹೆಗ್ಡೆ ಧ್ವಜರೋಹಣ ನೆರವೇರಿಸಿದರು. ಕೆಳಖಜಾನೆ ಶ್ರೀರಾಮ ಫ್ರೆಂಡ್ಸ್ ಅಧ್ಯಕ್ಷ ರಿತೇಶ ಶೆಟ್ಟಿ, ಕಾರ್ಯದರ್ಶಿ ಮಹೇಶ ಕುಲಾಲ್, ಶ್ರೀರಾಮ ಫ್ರೆಂಡ್ಸ್ ಪದಾಧಿಕಾರಿಗಳು, ಸ್ಥಳೀಯರು ಭಾಗವಹಿಸಿದ್ದರು.

