ಪಡುಕುಡೂರು: ಸ್ವಾತಂತ್ರ್ಯೋತ್ಸವ ಸಂಭ್ರಮ : ಎಂ.ಡಿ. ಅಧಿಕಾರಿಯವರ ಪುತ್ಥಳಿಗೆ ಮಾಲಾರ್ಪಣೆ

0
114

ಪಡುಕುಡೂರು : ಹೆಬ್ರಿ ತಾಲ್ಲೂಕಿನ ಪಡುಕುಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ವತಿಯಿಂದ ೭೯ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಶುಕ್ರವಾರ ನಡೆಯಿತು. ಧ್ವಜಾರೋಹಣಕ್ಕೆ ಮೊದಲು ಸ್ವಾತಂತ್ರ್ಯ ಹೋರಾಟಗಾರ ಪಡುಕುಡೂರುಬೀಡು ಎಂ.ಡಿ.ಅಧಿಕಾರಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಎಂ.ಡಿ.ಅಧಿಕಾರಿ ಪುತ್ರ ವರಂಗ ವೃಷಭದೇವ ಅಧಿಕಾರಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಶಾಲೆಯಲ್ಲಿ ಹಿರಿಯರಾದ ಪಡುಕಪರ್ಕಳ ಶ್ರೀಧರ ಶೆಟ್ಟಿ ಧ್ವಜರೋಹಣ ನೆರವೇರಿಸಿದರು. ಪಡುಕುಡೂರು ಪಟೇಲರ ಮನೆ ಜಗದೀಶ ಹೆಗ್ಡೆ, ಪುತ್ಥಳಿ ನಿರ್ಮಾಣದ ರೂವಾರಿ ಪಡುಪರ್ಕಳ ಶಂಕರ ಶೆಟ್ಟಿ, ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಗೌರವಾಧ್ಯಕ್ಷ ಪಡುಪರ್ಕಳ ಹರೀಶ ಶೆಟ್ಟಿ ಮುಂಬಯಿ, ಅಧ್ಯಕ್ಷ ಸಂದೀಪ್‌ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷ ಹರೀಶ ಪೂಜಾರಿ, ಮುಖ್ಯ ಶಿಕ್ಷಕ ಹರೀಶ ಪೂಜಾರಿ ಎಸ್‌, ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸನ್ನ ಶೆಟ್ಟಿ ಜಯಲೀಲಾ, ವಿವಿಧ ಪ್ರಮುಖರಾದ ಅಶೋಕ್‌ ಎಂ ಶೆಟ್ಟಿ, ಜ್ಯೋತಿಪ್ರಸಾದ್‌ ಶೆಟ್ಟಿ, ಭಾಸ್ಕರ ಶೆಟ್ಟಿ, ಧರ್ಮಸ್ಥಳ ಯೋಜನೆಯ ಚಿತ್ರಾ, ಅಂಗನವಾಡಿ ಶಿಕ್ಷಕಿ ಸವಿತಾ ಶೆಟ್ಟಿ, ಅಮಿತಾ ಶೆಟ್ಟಿ, ಚಂದ್ರಶೇಖರ ಶೆಟ್ಟಿಗಾರ್‌, ಭಾರವಿ ಹೆಗ್ಡೆ, ಶಂಕರ ಶೆಟ್ಟಿ ಮಾವಿನಕಟ್ಟೆ, ಶಾಲೆಯ ಶಿಕ್ಷಕಿಯರು, ವರಂಗ ಗ್ರಾಮ ಪಂಚಾಯಿತಿ ಸದಸ್ಯರಾದ ತಾರಾವತಿ ಶೆಟ್ಟಿ, ಸಂತೋಷ ನಾಯ್ಕ್‌,ಊರಿನ ಗಣ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಹಳೇ ವಿದ್ಯಾರ್ಥಿ ಸಂಘ ಮತ್ತು ಎಂ.ಡಿ.ಅಧಿಕಾರಿ ಯೂತ್‌ ಕ್ಲಬ್‌ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here