ಭಟ್ಕಳ- ಭಾರತವು ಜ್ಞಾನ ದಿಂದ ಕೂಡಿದ್ದ ರಾಷ್ಟ. ಭಾರತವನ್ನು ತಾಯಿ ಹೆಸರಿಂದ ಕರೆಯಲಾಗುತ್ತದೆ. ಇಲ್ಲಿ ತಂದೆಗಿಂತ ತಾಯಿಗೆ ಹೆಚ್ಚಿನ ಮೌಲ್ಯನೀಡಲಾಗುತ್ತದೆ. ಪ್ರತಿ ಮನೆಯಲ್ಲಿ ಮಾತೆಯರು ಜಾಗೃತರಾಗಬೇಕು.ಆಗ ಮಾತ್ರ ಸದೃಡ ಭಾರತವನ್ನು ಕಾಣಬಹುದು ಎಂದು ಮಂಗಳೂರು ವಜ್ರದೇಹಿ ಮಠದ ಗುರುಗಳಾದ ವಿದುಶೇಖರ ಭಾರತಿ ಸ್ವಾಮಿಗಳು ನುಡಿದರು.

ಅವರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನ ಮುಂಡಳ್ಳಿ ಇದರ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಎರಡನೇ ದಿನವಾದ ಸೋಮವಾರ ಸಭಾ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದರು. ಭಾರತ ಹಿಂದೆಂದು ಕಾಣದ ರೀತಿಯಲ್ಲಿ ಅಭೂತಪೂರ್ವ ವಾಗಿ ಬದಲಾವಣೆ ಕಾಣುತ್ತಿದೆ. ಭಾರತದ ಮುಂದೆ ಜಗತ್ತು ತಲೆಬಾಗಿದೆ. ಹದು ಸಮಾಜದ ಜಾಗೃತ ಸ್ಥಿತಿ ಯಿಂದ ಇದು ಸಾಧ್ಯವಾಗಿದೆ ಎಂದರು.
ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಉಸ್ತಿತರಿದ್ದ ದೇವಸ್ಥಾನ ಆಡಳಿತ ಮಂಡಳಿಯ ಅದ್ಯಕ್ಷ ಎಸ್ ಬಿ.ಬೊಮ್ಮಾಯಿ ಮಾತನಾಡಿ ಮುಂಡಳ್ಳಿ ಸಮಸ್ತ ಹಿಂದುಗಳ ಒಗ್ಗಟ್ಟಿನಿಂದ ಇಂತಹ ಒಂದು ಬ್ರಹತ್ ಕಾರ್ಯಕ್ರಮ ಆಯೋಜನೆ ಸಾಧ್ಯವಾಗಿದೆ.ದೇವರ ವಿಚಾರಕ್ಕೆ ಬಂದಾಗ ಮುಂಡಳ್ಳಿಯ ಒಗ್ಗಟ್ಟು ಸಹಕಾರ ಸದಾ ಇರುತ್ತದೆ ಎನ್ನುವುದುಮತ್ತೆ ಮತ್ತೆ ಸಾಬಿತಾಗಿದೆ ಎಂದರು.
ವೇದಿಕೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ನಾಗರಾಜ್ ಭಟ್, ಕುದುರೆಬೀರಪ್ಪ ದೇವಸ್ಥಾನದ ಅಧ್ಯಕ್ಷ ಶಂಕರ ನಾಯ್ಕ, ಅಬ್ಬಿಮಹಾರಾಜ ದೇವಸ್ಥಾನ ಅಧ್ಯಕ್ಷ ಗಣೇಶ ಗುಡಿಮನೆ, ನಾಗಶ್ರೀ ದೇವಸ್ಥಾನ ಅಧ್ಯಕ್ಷ ಪರಮೇಶ್ವರ ಮೊಗೇರ,ಗಣೇಶೋತ್ಸವ ಸಮಿತಿ ಅಧ್ಯಕ್ಷ ನಾಗಪಯ್ಯ ಆಚಾರ್ಯ,ಶಾರದೋತ್ಸವ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಎಸ್ ಬಿ.ಬೊಮ್ಮಾಯ್ ಸ್ವಾಗತಿಸಿದರು. ಕಾರ್ಯಕ್ರಮ ವನ್ನು ರೇಷ್ಮಾ ಉಮೇಶ ನಿರ್ವಹಿಸಿದರು. ಯಮುಮಾ ದಿನೇಶ ಪ್ರಾರ್ಥಿಸಿದರು.

