ಏಷ್ಯಾಕಪ್ ಫೈನಲ್‌ನಲ್ಲಿ ಪಾಕ್ ಬಗ್ಗುಬಡಿದ ಭಾರತಕ್ಕೆ ರೂ. 21 ಕೋಟಿ ಬಹುಮಾನ!

0
199

ದುಬೈ: ಏಷ್ಯಾಕಪ್‌ನಲ್ಲಿ ಭಾರತ ದಾಖಲೆಯ 9ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ 17ನೇ ಆವೃತ್ತಿಯ ಟೂರ್ನಿಯ ಫೈನಲ್ ನಲ್ಲಿ ಟೀಂ ಇಂಡಿಯಾ ತನ್ನ ಬದ್ದವೈರಿ ಪಾಕಿಸ್ತಾನ ವಿರುದ್ಧ 5 ವಿಕೆಟ್ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಪಾಕಿಸ್ತಾನದ 3ನೇ ಟ್ರೋಫಿ ಕನಸು ಭಗ್ನಗೊಂಡಿತು.

ಗುಂಪು ಹಂತ ಹಾಗೂ ಸೂಪರ್-4ನಲ್ಲಿ ಪಾಕಿಸ್ತಾನವನ್ನು ಸುಲಭದಲ್ಲಿ ಮಣಿಸಿದ್ದ ಭಾರತ ಫೈನಲ್ ಪಂದ್ಯದಲ್ಲಿ ಗೆಲ್ಲಲು ತಿಣುಕಾಡಿತು. ಬದ್ದ ಎದುರಾಳಿ ಪಾಕಿಸ್ತಾನವನ್ನು ಫೈನಲ್‌ನಲ್ಲಿ ಬಗ್ಗುಬಡಿದ ಭಾರತಕ್ಕೆ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ. ಏಷ್ಯಾಕಪ್ ಟ್ರೋಫಿ ಗೆದ್ದ ತಂಡಕ್ಕೆ ಸಿಗುವ ನಗದು ಬಹುಮಾನದ 10 ಪಟ್ಟು ಬಹುಮಾನ ಇದೀಗ ಟೀಂ ಇಂಡಿಯಾ ಪಾಲಾಗಿದೆ.

ಬಿಸಿಸಿಐನಿಂದ ₹21 ಕೋಟಿ ಬಹುಮಾನ!

ಏಷ್ಯಾಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯಕ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ ₹21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದು ಏಷ್ಯಾಕಪ್ ಆಯೋಜಕರಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನಿಂದ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತಕ್ಕಿಂತ 10 ಪಟ್ಟು ಹೆಚ್ಚು. ಟೂರ್ನಿಯ ಬಹುಮಾನ ಮೊತ್ತವಾಗಿ ಭಾರತಕ್ಕೆ ₹2.6 ಕೋಟಿ ಲಭಿಸಿತು. ರನ್ನರ್-ಅಪ್ ಪಾಕಿಸ್ತಾನಕ್ಕೆ ಏಷ್ಯಾ ಕ್ರಿಕೆಟ್ ಮಂಡಳಿಯಿಂದ 1.3 ಕೋಟಿ ರು. ಬಹುಮಾನ ದೊರೆಯಿತು. ಅಭಿಷೇಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

LEAVE A REPLY

Please enter your comment!
Please enter your name here