ಬೆಂಗಳೂರು : ಆಟೊ ಎಲ್‌ಪಿಜಿ ಪೂರೈಕೆಯನ್ನು ರಾಜ್ಯದ ಎಲ್ಲೆಡೆ ಹೆಚ್ಚು ಮಾಡಿರುವುದಾಗಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಂಪನಿ ತಿಳಿಸಿದೆ.
ಆಟೊ ಎಲ್‌ಪಿಜಿಗೆ ಬೇಡಿಕೆ ಹೆಚ್ಚಾಗಿದೆ, ಅದರಲ್ಲೂ ಮುಖ್ಯವಾಗಿ ಕೆಲವು ಖಾಸಗಿ ಬಂಕ್‌ಗಳಲ್ಲಿ ವಹಿವಾಟು ಸ್ಥಗಿತಗೊಂಡ ನಂತರದಲ್ಲಿ ಈ ರೀತಿ ಆಗಿದೆ ಎಂಬ ವರದಿಗಳಿಗೆ ಪ್ರತಿಕ್ರಿಯೆಯಾಗಿ ಪೂರೈಕೆ ಹೆಚ್ಚಿಸಲಾಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಣೆ ತಿಳಿಸಿದೆ.
ಇಂಡಿಯನ್ ಆಯಿಲ್ ಕಂಪನಿಯು ವಾಹನಗಳಲ್ಲಿ ಬಳಸುವ ಎಲ್‌ಪಿಜಿ ಮಾರಾಟ ಮಾಡಲು ರಾಜ್ಯದಲ್ಲಿ ಒಟ್ಟು 55 ಕೇಂದ್ರಗಳನ್ನು ಹೊಂದಿದೆ.
ಖಾಸಗಿ ಕಂಪನಿಗಳ 300ಕ್ಕೂ ಹೆಚ್ಚು ಅನಿಲ ಬಂಕ್‌ಗಳು ವಹಿವಾಟು ನಿಲ್ಲಿಸಿವೆ ಅಥವಾ ವಹಿವಾಟು ಕಡಿಮೆ ಮಾಡಿವೆ ಎಂಬ ವರದಿಗಳು ಇವೆ. ಇದರಿಂದಾಗಿ ಗಣನೀಯ ಪ್ರಮಾಣದ ಬೇಡಿಕೆಯು ಸರ್ಕಾರಿ ಸ್ವಾಮ್ಯದ ಕಂಪನಿಗಳ ಅನಿಲ್ ಬಂಕ್‌ಗಳ ಕಡೆ ತಿರುಗಿದೆ ಎಂದು ಇಂಡಿಯನ್ ಆಯಿಲ್ ಪ್ರಕಟಣೆಯಲ್ಲಿ ಹೇಳಲಾಗಿದೆ.

