ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾಣಿಜ್ಯ ಸಂಘದ ವತಿಯಿಂದ ಕೈಗಾರಿಕಾ ಭೇಟಿ ಜರಗಿತು. ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದಲ್ಲಿ ಹಾಗೂ ಕೃಷಿ ವಲಯದಲ್ಲಿರುವ ವಿವಿಧ ಅವಕಾಶಗಳನ್ನು ತಿಳಿಯಪಡಿಸುವ ಉದ್ದೇಶದಿಂದ ಈ ಭೇಟಿಯನ್ನು ಆಯೋಜಿಸಲಾಗಿತ್ತು.
ಇಕೋ–ಬ್ಲಿಸ್ ಸಂಸ್ಥೆಗೆ ಭೇಟಿ:
ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಬಳಿಪಗುಳಿ, ವಿಟ್ಲಪಡ್ನೂರಿನಲ್ಲಿರುವ ಭಾರತದ ಪ್ರಮುಖ ಹಾಳೆ ತಟ್ಟೆಗಳ ರಫ್ತುದಾರರು ಮತ್ತು ತಯಾರಕರಲ್ಲಿ ಒಂದಾದ ಇಕೋ–ಬ್ಲಿಸ್ ಸಂಸ್ಥೆಗೆ ಭೇಟಿ ನೀಡಿದರು. ಈ
ಸಂದರ್ಭದಲ್ಲಿ ಸಂಸ್ಥೆಯ ಮಾಲೀಕರಾದ ರಾಜಾರಾಮ್ ಇವರು ಹಾಳೆ ತಟ್ಟೆಗಳ ತಯಾರಿಕೆ ಹಾಗೂ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೇವಿಪ್ರಸಾದ್, ವಾಣಿಜ್ಯ ಸಂಘದ ಸಂಯೋಜಕರಾದ ಉಷಾ ಎ ಎಂ, ಹಾಗೂ ಉಪನ್ಯಾಸಕರಾದ ಶ್ರೀಧರ್ ಶೆಟ್ಟಿಗಾರ್ ವಿ, ಗ್ರೀಷ್ಮ ಕೆ ಎಸ್ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ಸುಮಾರು 250 ವಿದ್ಯಾರ್ಥಿಗಳ ತಂಡ ಕೈಗಾರಿಕಾ ಭೇಟಿಯಲ್ಲಿ ಭಾಗವಹಿಸಿತು.

