ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗಾಗಿ ʻಉದ್ಯೋಗಾವಕಾಶಗಳುಮತ್ತುವೃತ್ತಿಪರ ಕೋರ್ಸ್ಗಳುʼ ಎಂಬವಿಶೇಷಮಾಹಿತಿ ಮತ್ತು ಕೌಶಲ್ಯಾಭಿವೃದ್ದಿ ಕಾರ್ಯಾಗಾರವು ಕಾಲೇಜಿನವೈದೇಹಿಸಭಾಂಗಣದಲ್ಲಿನಡೆಯಿತು. ಪ್ರಸ್ತುತವಾಣಿಜ್ಯ ಕ್ಷೇತ್ರದಲ್ಲಿವಿಪುಲ ಉದ್ಯೋಗವಕಾಶಗಳಿದ್ದು ವಿದ್ಯಾರ್ಥಿಗಳು ಸಿ.ಎ ಹಾಗೂ ಸಿ.ಎಸ್‌ನಂತಹ ಉನ್ನತ ವೃತ್ತಿಪರ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂಬ ಸವಿವರವಾದ ಮಾಹಿತಿಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಉಷಾ ಎ. ಎಮ್. ನೀಡಿದರು.

ಇಂದಿನ ಆಧುನಿಕ ಯುಗದಲ್ಲಿ ಕೌಶಲ್ಯಾಭಿವೃದ್ಧಿಯ ಅಗತ್ಯತೆ, ಸಾಪ್ಟ್ವೇರ್ ಜ್ಞಾನ, ಷೇರು ಮಾರುಕಟ್ಟೆ ಮತ್ತು ಮ್ಯೂಚ್‌ವಲ್ ಫಂಡ್ ಹಾಗೂ ಟ್ಯಾಲಿ-ಸರ್ಟಿಫಿಕೇಟ್ ಕೋರ್ಸ್ ಗಳ ಬಗ್ಗೆ ಮಾಹಿತಿಯನ್ನು ವಾಣಿಜ್ಯ ವಿಭಾಗದ ಉಪನ್ಯಾಸಕಿ ಗ್ರೀಷ್ಮ ಕೆ. ಎಸ್ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರು ಉಪಸ್ಥಿತರಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು.

