ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಇನ್ನೋವಾ ಕಾರು

0
19

ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರೊಂದು ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಸಮೀಪದ ಗುಂಡಿಗೆ ಬಿದ್ದ ಘಟನೆ ಮುಂಜಾನೆ ನಡೆದಿದೆ.

ಅಪಘಾತದ ಪರಿಣಾಮ ಕಾರು ಗುಂಡಿಯಲ್ಲಿದ್ದ ಮರ-ಗಿಡಗಳಿಗೆ ತಾಗಿ ನಿಂತಿದ್ದು, ಕಾರಿಗೆ ಹಾನಿಯಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಅಪಘಾತದ ಬಳಿಕ ಕ್ರೇನ್ ಮೂಲಕ ಕಾರನ್ನು ಗುಂಡಿಯಿಂದ ಮೇಲಕ್ಕೆತ್ತುವ ಕಾರ್ಯ ನಡೆಯಿತು ಎಂದು ತಿಲಿದುಬಂದಿದೆ.