ಮಂಗಳೂರಿನ ಜೆಪ್ಪು ಬಪ್ಪಾಲ್ ವೆಟ್ವಲ್ ಪರಿಶೀಲನೆ ಸರ‍್ವಜನಿಕರಿಂದ ದೂರು ಐವನ್ ಡಿʼಸೋಜಾ ಸ್ಥಳಕ್ಕೆ ಭೇಟಿ ಪರಿಶೀಲನೆ

0
8

ಮಂಗಳೂರಿನ ಜೆಪ್ಪು ಬಪ್ಪಾಲ್ನಲ್ಲಿ ವೆಟ್ವೆಲ್ ಕಾಮಗಾರಿ ಪ್ರಗತಿಯಲ್ಲಿದ್ದು, ಕಳೆದ ಮೂರು ರ‍್ಷಗಳಿಂದ ಸತತವಾಗಿ ಬಂಡೆಕಲ್ಲು ಒಡೆಯುವ ಮೂಲಕ ಅಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಪ್ರಸ್ತುತ ವೆಟ್ವೆಲ್ ಸಂಪರ‍್ಣ ನಿಷ್ಟ್ರೀಯವಾಗಿದ್ದು, ನೀರನ್ನು ರಸ್ತೆ ಹಾಗೂ ಚರಂಡಿಗಳಲ್ಲಿ ಹರಿಯುತ್ತಿರುವ ಬಗ್ಗೆ ದೂರುಗಳಿದ್ದು, ಇಂದು ಐವನ್ ಡಿʼಸೋಜಾರವರು ಭೇಟಿ ನೀಡಿ ಪರಿಶೀಲಿಸಿದರು.

ಅನೇಕ ತಿಂಗಳುಗಳಿಂದ ಬಂಡೆಕಲ್ಲು ಒಡೆಯುತ್ತಿರುವುದರಿಂದ ಆಗಿರುವ ತೊಂದರೆಗಳನ್ನು ವೆಟ್ವೆಲ್ನ ಕಾಮಗಾರಿ ಪರ‍್ಣಗೊಳ್ಳದಿರುವ ಕಾರಣಗಳನ್ನು ತಿಳಿಸಿದರು. ಅದೇ ರೀತಿ ಈ ಹಿಂದೆ ವೆಟ್ವೆಲ್ ನ ಪಂಪುಗಳು ಹಾಳಾಗಿದ್ದು, ಸಂರ‍್ಕ ಇಲ್ಲದೇ ಇರುವುದರಿಂದ ನೀರನ್ನು ತೋಡುಗಳಲ್ಲಿ ಹರಿಯುತ್ತಿದ್ದು ಸ್ಥಳೀಯರ ಬಾವಿಗಳು ಕಲುಷಿತಗೊಂಡು ಕುಡಿಯಲು ಅಸಾಧ್ಯವಾಗಿದ್ದು, ತೋಡುಗಳಲ್ಲಿ ಡ್ರೈನೇಜ್ ನೀರು ಹರಿದು ಅನಾರೋಗ್ಯಗೊಂಡಿದ್ದು ಸರ‍್ವಜನಿಕರು ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸರ‍್ವಜನಿಕರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳು ಇನ್ನು ಕೆಲವೇ ತಿಂಗಳಲ್ಲಿ ಕಾಮಗಾರಿಗಳು ಮುಗಿಯುದರಿಂದ ಮುಂದಿನ ತಿಂಗಳಲ್ಲಿ ಸಮಸ್ಯೆ ಪರಿಹರಿಸುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಾಜಿ ಕರ‍್ಪೊರೇಟರ್‌ಗಳಾದ ಭಾಸ್ಕರ್ ರಾವ್ ಹಾಗೂ ಅಪ್ಪಿಲತಾ, ಕಾಂಗ್ರೆಸ್ ನಾಯಕರಾದ ಅನಿಲ್ ತೋರಸ್, ವಿದ್ಯಾ ಅನಿಲ್, ಮೊಹಮ್ಮದ್ ನವಾಜ್ ಜಪ್ಪು, ನೆಲ್ಸನ್ ರೋಚೆ ಹಾಗೂ ಸ್ಥಳೀಯರಾದ ಜೋಸೆಫ್, ಸದಾನಂದ, ಇಡ್ನಾ ಡಿ’ಸೋಜಾ, ಸುರೇಂದ್ರ ಶೆಟ್ಟಿ, ರಮೇಶ್ ಶೆಟ್ಟಿ, ರೆಜಿನಾಲ್ಡ್ ಡಿಕೋಸ್ಟಾ, ಶಂಕರ್ ಭಟ್, ಸಂದೇಶ್, ತನ್ವಿ ಶೆಟ್ಟಿ ಮತ್ತು ಮೈಮು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here