ಪುತ್ತೂರು : ದಿನಾಂಕ :- 15-06-2025 ರಂದು ಆರ್ ಪಿ ಕಲಾ ಸೇವಾ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಇವರ ಆಶ್ರಯದಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ ಗಾನ ಶಾರದೆ ಗಾಯನ ಸ್ಪರ್ಧೆ ಸಿಸೇನ್ -4 ರ ಪ್ರಶಸ್ತಿ ಪ್ರದಾನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕೇಪು ಗ್ರಾಮದ ಕುಮಾರ :- ಲಿಖಿತ್ ಎಲ್ ಎನ್ ಸಾರಡ್ಕ ಇವರಿಗೆ “ಅಂತರ್ ರಾಜ್ಯ ಮಟ್ಟದ ಸಾಹಿತ್ಯ ರತ್ನ ಪ್ರಶಸ್ತಿ ” ದೊರಕಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಏಕೆಂದರೆ ಇನ್ನು ಇವರು 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದು 16 ನೇ ವರ್ಷಕ್ಕೆ ಪಾದರ್ಪಣೆ ಮಾಡಿದ್ದೂ ಇಂತಹ ಚಿಕ್ಕ ವಯಸ್ಸಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿ ಮೂಡಿಗೆರಿಸಿಕೊಳ್ಳುತ್ತಾ ಸಾಹಿತ್ಯ ಕೃಷಿ ಮಾಡ್ತಾ ಇರೋದು ನಮ್ಮ ಕರುನಾಡಿಗೆ ಹೆಮ್ಮೆಯ ವಿಷಯ ಇವರ ಸಾಹಿತ್ಯ ಸೇವೆ ಇದೆ ತರ ಸಾಗ್ತಾ ಇರಲಿ ಎನ್ನುವುದೇ ನಮ್ಮೆಲ್ಲರ ಆಶಯ ಪ್ರಶಸ್ತಿ ಸಿಕ್ಕಿದ್ದಕ್ಕೆ ಟ್ರಸ್ಟ್ ಸಮಿತಿಯವರು ಹೆತ್ತವರು ಬಂಧು ಬಳಗದವರು ಶಾಲೆಯ ಶಿಕ್ಷಕರು ಸಹ ಪಾಠಿಗಳು ಗ್ರಾಮದ ಗುರು ಹಿರಿಯರು ಎಲ್ಲರೂ ಹರ್ಷ ವ್ಯಕ್ತಪಡಿಸಿದ್ದಾರೆ