ಸಾಧನೆಯ ಹಾದಿಯಲ್ಲಿ ಸಾಗಿದರೆ ಸಮಾಜದಲ್ಲಿ ಗೌರವ: ಪ್ರೊ.ದ್ವಾರಕೀಶ್
ಮುಕ್ಕ: ವಿದ್ಯಾರ್ಥಿಗಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಗುಣಮಟ್ಟದಲ್ಲಿ ಶಿಕ್ಷಣ ಪಡೆದು ಸಾಧನೆಯ ಹಾದಿಯಲ್ಲಿ ಸಾಗಿದರೆ ಪೋಷಕರಿಗೆ, ಕಲಿತ ಕಾಲೇಜಿಗೆ ಒಳ್ಳೆಯ ಹೆಸರು ತರುವಂತಹ ಕಾರ್ಯ ಮಾಡಿದರೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ ಎಂದು ಸುರತ್ಕಲ್ ಎನ್ ಐ ಟಿ ಕೆಯ ಪ್ರೊಫೆಸರ್ ದ್ವಾರಕೀಶ್ ಜಿ.ಎಸ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಮುಕ್ಕ ಮಿತ್ರಪಟ್ಣ ಮೊಗವೀರ ಸಂಘದ ವತಿಯಿಂದ ಜ್ಞಾನ ದೇಗುಲದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೈಕಂಪಾಡಿ ಮೀನಕಳಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಶೃತಿ ಪ್ರದೀಪ್ ಕುಂದರ್ ಮಾತನಾಡಿ ಸಾಧನೆ ಎಂಬುದು ಸುಲಭ ಮಾರ್ಗವಲ್ಲ ಅದೊಂದು ಅದ್ಭುತ ತಪಸ್ಸು, ಸಾಧನೆ ಮಾಡುವ ಹಾದಿಯಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಯಶಸ್ಸು ಪಡೆಯುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿತ್ರಪಟ್ಣ ಮೊಗವೀರ ಸಂಘದ ಅಧ್ಯಕ್ಷ ಸುರೇಶ್ ಕರ್ಕೇರ ವಹಿಸಿದ್ದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ನಿಕಟಪೂರ್ವ ಸದಸ್ಯೆ ಶ್ರೀಮತಿ ಶೋಭಾ ರಾಜೇಶ್, ಶ್ರೀರಾಮ ಭಜನಾ ಮಂದಿರ ಅಧ್ಯಕ್ಷ ಪ್ರದೀಪ್ ಕುಂದರ್, ಮಿತ್ರಪಟ್ಣ ಮಹಿಳಾ ಸಂಘದ ಅಧ್ಯಕ್ಷೆ ಕವಿತಾ ಶರತ್, ಮಿತ್ರಪಟ್ಣ ಮೀನುಗಾರರ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಸಂತ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ತೇರ್ಗಡೆಯಾದ ವಿದ್ಯಾರ್ಥಿಗಳಾದ ಆಕಾಶ್ ಜಿ.ಕರ್ಕೇರ, ರಕ್ಷಿತ್ ಆರ್, ಕು.ನಿವ್ಯ ಕೆ.ಎಸ್, ಕು.ದಿಯಾ ಎಚ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸುಮಾರು 85 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ಪುರಂದರ ಬಂಗೇರ, ಕೋಶಾಧಿಕಾರಿ ಯಶ್ ರಾಜ್ ಕರ್ಕೇರ, ಜೊತೆ ಕೋಶಾಧಿಕಾರಿ ರಾಜ್ ಕುಮಾರ್ ಕರ್ಕೇರ, ಜೊತೆ ಕಾರ್ಯದರ್ಶಿ ಸುನೀಲ್ ಸಾಲ್ಯಾನ್, ಲೋಕೇಶ್ ಸಾಲ್ಯಾನ್, ಪುರುಷೋತ್ತಮ ಸುವರ್ಣ,ವಿಜಯ ಪುತ್ರನ್, ಕಿಶೋರ್ ಪುತ್ರನ್,ರಾಜೇಶ್ ಸುವರ್ಣ,ಶೈಲೇಶ್ ಸುವರ್ಣ, ಪ್ರಶಾಂತ್ ಸುವರ್ಣ, ಲಕ್ಷ್ಮಣ್ ಪುತ್ರನ್,ಪ್ರಶಾಂತ್ ಪುತ್ರನ್,ಲೋಕೇಶ್ ಬಂಗೇರ, ಕಿಶೋರ್ ಕುಮಾರ್, ಧನುಷ್ ಮೊದಲಾದವರು ಭಾಗವಹಿಸಿದ್ದರು.
ಪ್ರಥಮ್ ಪಿ.ಸುವರ್ಣ ಕಾರ್ಯಕ್ರಮ ನಿರೂಪಿಸಿದರು, ಕು.ಹರ್ಷಾ ಪಿ.ಬಂಗೇರ ಸ್ವಾಗತಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಆರ್ ವಂದಿಸಿದರು.