ಮೂಲ್ಕಿಯಲ್ಲಿ ಅಂತರರಾಷ್ಟ್ರೀಯ ಪೋಲಿಯೋ ದಿನಾಚರಣೆ : ರೋಟರಿ ಕ್ಲಬ್‌ನಿಂದ ಬೃಹತ್ ಜಾಥಾ

0
6

ರೋಟರಿ ಕ್ಲಬ್ ಮೂಲ್ಕಿ ಅಂತರರಾಷ್ಟ್ರೀಯ ಪೋಲಿಯೋ ದಿನದ ಅಂಗವಾಗಿ ರೋಟರಿ ಕ್ಲಬ್ ಮೂಲ್ಕಿ ವತಿಯಿಂದ ಬ್ರಹತ್ ಜಾಥಾವನ್ನು ಏರ್ಪಡಿಸಲಾಗಿತ್ತು.ರೋಟರಿ ಜಿಲ್ಲೆ 3181 ಇದರ ವಾಹನ ಜಾಥಾವನ್ನು ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿ ಬೀಳ್ಕೊಟ್ಟ ನಂತರ, ಸರಕಾರೀ ಪ.ಪೂ.ಕಾಲೇಜು ಹಾಗೂ ಶ್ರೀ ವ್ಯಾಸ ಮಹರ್ಷಿ ಪ್ರೌಢಶಾಲೆಯ ಇಂಟರಾಕ್ಟ್ ಕ್ಲಬ್ ಗಳು,ವಿದ್ಯಾರ್ಥಿಗಳು,ಪ್ರಾಧ್ಯಾಪಕರು,ಪೊಲೀಸ್ ಠಾಣಾ ಸಿಬ್ಬಂದಿಗಳ ಸಹಕಾರದೊಂದಿಗೆ 10.30 ಗಂಟೆಗೆ ಬ್ರಹತ್ ಜಾಥಾಕ್ಕೆ ಚಾಲನೆ ನೀಡಲಾಯಿತು.

ರೋಟರಿ ಕ್ಲಬ್ ನ ಸಹಾಯಕ ಗವರ್ನರ್ ರೊ.ಜೋಯಲ್ ಡಿಸೋಜ, ಕಾರ್ಯದರ್ಶಿ ರೊ.ಭುಜಂಗ ಬಿ.ಕವತಾರ್, ಸದಸ್ಯರಾದ ರೊ.ಅಶೋಕಕುಮಾರ್ ಶೆಟ್ಟಿ, ರೊ.ಪ್ರಶಾಂತ್ ಶೆಟ್ಟಿಯವರು ಭಾಗವಹಿಸಿದ್ದರು.