ಶ್ರೀ ಮಹಾವೀರ ಪದವಿ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಉಪನ್ಯಾಸಕಾರ್ಯಕ್ರಮ ನಡೆಯಿತು.
ಕಾಲೇಜಿನ ಲೇಡಿ ಸ್ಟೂಡೆಂಟ್ಸ್ ಅಸೋಸಿಯೇಶನ್ (ವಿದ್ಯಾರ್ಥಿನಿಯರ ಸಂಘ), ಎನ್.ಎಸ್.ಎಸ್ ಮತ್ತು ಐಕ್ಯೂಎಸಿಗಳ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಳ್ವಾಸ್ ಮೆಡಿಕಲ್‌ಕಾಲೇಜಿನ ಮೆಡಿಕಲ್ ಸೂಪರಿಟೆಂಡೆAಟ್, ಪ್ರಾಧ್ಯಾಪಕರು ಹಾಗೂ ಕಾಯಚಿಕಿತ್ಸಾ ವಿಭಾಗ ಮುಖ್ಯಸ್ಥರುಆಗಿರುವಡಾ.ಸುರೇಖಾ ಪೈ ಅವರು ಭಾಗವಹಿಸಿ ಮಾತನಾಡುತ್ತಾ“ಸಮಾಜದ ಏಳಿಗೆಗೆ ಪುರುಷ ಮತ್ತು ಮಹಿಳೆಯರ ಸಹಭಾಗಿತ್ವಅಗತ್ಯ.ಮನೆಯ ಒಳ ಹೊರಗಿನ ಕೆಲಸವನ್ನು ಪತಿ-ಪತ್ನಿಯರು ಹಂಚಿಕೊAಡು ಮಾಡಬೇಕು.
ಹೆಣ್ಣುಮಕ್ಕಳ ಸಾಧನೆಗೆಕುಟುಂಬದಇತರ ಮಹಿಳಾ ಮತ್ತು ಪುರುಷ ಸದಸ್ಯರ ಬೆಂಬಲ ಇರಬೇಕು.ಅನಾರೋಗ್ಯದಿಂದಾಗುವಚಿಕಿತ್ಸಾ ವೆಚ್ಚ ಉಳಿಸಲು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ 7 ಘಂಟೆಗಳ ನಿದ್ರೆಎಲ್ಲರಿಗೂಅಗತ್ಯ. ಮಲಗುವ ಮೊದಲು ಮೊಬೈಲ್ ನೋಡುವುದನ್ನುಕಡಿಮೆ ಮಾಡಿ”ಎಂದರು.ವಿವಿಧ ಕ್ಷೇತ್ರಗಳ ಮಹಿಳಾ ಸಾಧಕರನ್ನುರಸಪ್ರಶ್ನೆಯ ಮೂಲಕ ಪರಿಚಯಿಸಿದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ರಾಧಾಕೃಷ್ಣ ಮಾತನಾಡಿ“ಮಹಿಳಾ ಸಬಲೀಕರಣ ನಮ್ಮಧ್ಯೇಯವಾಗಬೇಕು.ಮಹಾವೀರಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮಹತ್ತರ ಸಾಧನೆಗಳನ್ನು ಮಾಡಿದ್ದಾರೆ.ಅತಿಥಿಗಳ ಮಾತಿನಂತೆ ಇಂದಿನ ವಿದ್ಯಾರ್ಥಿಗಳೂ ನಿಮ್ಮಗುರಿ ಸ್ಪಷ್ಟಪಡಿಸಿಕೊಳ್ಳಿ.ಮತ್ತರ ಸಾಧನೆಗಳನ್ನು ಮಾಡಿ”ಎಂದು ಸಂಪನ್ಮೂಲ ವ್ಯಕ್ತಿಯಾದಡಾ.ಸುರೇಖಾ ಪೈ ಅವರ ಭಾಷಣಕ್ಕಾಗಿಅವರನ್ನು ಅಭಿನಂದಿಸಿದರು.
ವೇದಿಕೆಯಲ್ಲಿ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲೆ ಹಾಗೂ ಎನ್‌ಸಿಸಿ ಅಧಿಕಾರಿ ಲೆಫ್ಟಿನೆಂಟ್ ವಿಜಯಲಕ್ಷಿ -, ವಿದ್ಯಾರ್ಥಿಕ್ಶೇಮಪಾಲನಾಧಿಕಾರಿ ಪ್ರೊ. ಹರೀಶ್, ಲೇಡಿ ಸ್ಟೂಡೆಂಟ್ಸ್ ಅಸೋಸಿಯೇಶನ್‌ನ ಸಂಯೋಜಕರಾದ ಪೂರ್ಣಿಮಾ, ಎನ್.ಎಸ್.ಎಸ್‌ಅಧಿಕಾರಿ ಶಾರದಾ ಎ., ವಿದ್ಯಾರ್ಥಿ ನಾಯಕಿ ಸಾಕ್ಷಿ ಶೆಟ್ಟಿಇವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿಅಂತಿಮ ಬಿ.ಕಾಂ. ವಿದ್ಯಾರ್ಥಿನಿ ನವ್ಯಾ ನಿರೂಪಿಸಿ ವಂದಿಸಿದರು.

