ಮಂಗಳೂರು: ತುಳು ಭಾಷೆ, ಕಲೆ , ಸಾಹಿತ್ಯ ಸಂಸ್ಕ್ರತಿಯ ಸಲುವಾಗಿ ಕಾರ್ಯ ನಿರ್ವಹಿಸುತ್ತಿರುವ ತುಳು ಸಂಘ, ಸಂಸ್ಥೆಗಳ ಮಾಹಿತಿ ಪುಸ್ತಕವನ್ನು ಅಕಾಡೆಮಿ ವತಿಯಿಂದ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ತಿಳಿಸಿದ್ದಾರೆ.
ರಾಜ್ಯ, ಹೊರರಾಜ್ಯ , ವಿದೇಶಗಳಲ್ಲಿ ಸಕ್ರಿಯವಾಗಿರುವ ತುಳು ಸಂಘ, ಸಂಸ್ಥೆಗಳು ತಮ್ಮ ಸಂಘ ಆರಂಭವಾದ ವರ್ಷ, ಕೆಲಸ ಕಾರ್ಯದ , ವ್ಯಾಪ್ತಿಯ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಎರಡು ಪುಟಗಳಿಗೆ ಮೀರದಂತೆ ಬರೆದು ಜೂನ್.15ರೊಳಗೆ ಅಕಾಡೆಮಿಗೆ ಕಳುಹಿಸುವಂತೆ ಕೋರಲಾಗಿದೆ.
ವಿವರಗಳನ್ನು ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್ / ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ , ತುಳು ಭವನ, ಅಶೋಕ ನಗರ ಪೋಸ್ಟ್, ಉರ್ವಸ್ಟೋರ್ ,ಮಂಗಳೂರು-06. ವಾಟ್ಸ್ ಪ್ ಸಂಖ್ಯೆ:7411572115 ಇಮೇಲ್ ವಿಳಾಸ: tulusahityaacademy@gmail.com