“ದುಬೈ ಯಕ್ಷೋತ್ಸವ-2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ

0
297

ದುಬೈ : ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಇದರ ದಶಮಾನೋತ್ಸವ ಸಂಭ್ರಮವು ಯಕ್ಷಧ್ರುವ ಪಟ್ಲ ಪೌಂಡೇಶನ್ ಯುಎಇ(ದುಬೈ) ಘಟಕದ ಸಹಯೋಗದೊಂದಿಗೆ ಜೂನ್29 ರಂದು ಜರಗಲಿರುವ “ದುಬೈ ಯಕ್ಷೋತ್ಸವ-2025” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆ ಕಾರ್ಯಕ್ರಮವು ಮೆ.11 ರಂದು ಜರುಗಿತ್ತು.


ನಗರದ ಗಿಸಾಸ್ ನ ಫಾರ್ಚೂನ್ ಪ್ಲಾಝದ ಬಾಕ್ವೆಂಟ್ ಸಭಾಂಗಣದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಇದೆ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಯುಎಇಯಲ್ಲಿ ಇರುವ ಎಲ್ಲ ತುಳು ಕನ್ನಡ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದ ಈ ಕಾರ್ಯಕ್ರಮ ಒಂದು ಅಭೂತಪೂರ್ವ ಸಾಕ್ಷಿಗೆ ಕಾರಣವಾಯಿತು. ಉಪಸ್ಥಿತರಿದ್ದ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಹಾಗೂ ಎಲ್ಲಾ ಸಮಾಜದ ಪದಾಧಿಕಾರಿಗಳು ಜೂನ್ 29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ತಮ್ಮ ತಮ್ಮ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ, ಯುಎಇ ಬಂಟ್ಸ್ ಮತ್ತು ಕರ್ನಾಟಕ ಎನ್ ಅರ್ ಐ ವೇದಿಕೆಯ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ,ಬ್ರಾಹ್ಮಣ ಸಮಾಜ ಯುಎಇಯ ಅಧ್ಯಕ್ಷರಾದ ಸುಧಾಕರ ರಾವ್ ಪೇಜಾವರ,ಉದ್ಯಮಿ ಕಲಾಪೋಷಕರಾದ ಶಿವಶಂಕರ ನೆಕ್ರಾಜೆ,ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾದ ಸತೀಶ್ ಪೂಜಾರಿ,ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕರಾದ ಅಧ್ಯಕ್ಷರಾದ ಅಮರ್ ದೀಪ್ ಕಲ್ಲೂರಾಯ,ಕರ್ನಾಟಕ ಜಾನಪದ ಅಕಾಡೆಮಿ ದುಬೈಯ ಅಧ್ಯಕ್ಷರಾದ ಸದನ್ ದಾಸ್,ಕರ್ನಾಟಕ ಸಂಘ ದುಬೈಯ ಮನೋಹರ ಹೆಗ್ಡೆ,ನಾಗರಾಜ ರಾವ್ ಉಡುಪಿ,ಕನ್ನಡಿಗರ ಕನ್ನಡ ಕೂಟ ದುಬೈಯ ಅಧ್ಯಕ್ಷರಾದ ಅರುಣ್ ಕುಮಾರ್,ಉದ್ಯಮಿ ರಶ್ಮಿಕಾಂತ್ ಶೆಟ್ಟಿ,ಕರ್ನಾಟಕ ಸಂಘ ದುಬೈಯ ಗೌರವ ಸಲಹೆಗಾರರಾದ ಜಯಂತ್ ಶೆಟ್ಟಿ,ತೀಯಾ ಸಮಾಜ ಯುಎಇಯ ಅಧ್ಯಕ್ಷೆ ಶ್ರೀಮತಿ ಜೆಸ್ಮೀತಾ ವಿವೇಕ್,ಗಮ್ಮತ್ ಕಲಾವಿದೆರ್ ದುಬೈಯ ನಿರ್ದೆಶಕರಾದ ವಿಶ್ವನಾಥ ಶೆಟ್ಟಿ, ಬಿಲ್ಲವಾಸ್ ದುಬೈಯ ಅಧ್ಯಕ್ಷರಾದ ದೀಪಕ್ ಎಸ್. ಪಿ,ಹಿರಿಯ ಯಕ್ಷಗಾನ ಕಲಾವಿದರಾದ ಪ್ರಭಾಕರ ಸುವರ್ಣ ಕರ್ನಿರೆ,ರಂಗ ಕಲಾವಿದರಾದ ವಾಸು ಶೆಟ್ಟಿ, ಉದ್ಯಮಿ ರಮಾನಂದ ಶೆಟ್ಟಿ, ಜೈನ್ ಮಿಲನ್ ದುಬೈಯ ಸಂದೇಶ್ ಜೈನ್,ಗಾಣಿಗ ಸಮಾಜ ದುಬೈಯ ಸುಪ್ರೀತ್ ಗಾಣಿಗ,ವೀರಶೈವ ಲಿಂಗಯುತ ಸಮಾಜ ದುಬೈಯ ಮಲ್ಲಿಕಾರ್ಜುನ ಗೌಡ,ಹಿರಿಯ ಹಿಮ್ಮೇಳ ವಾದಕರಾದ ವೆಂಕಟೇಶ ಶಾಸ್ತ್ರಿ,ಒಕ್ಕಲಿಗರ ಸಂಘ ಯುಎಇಯ ಅಧ್ಯಕ್ಷರಾದ ಕಿರಣ್ ಗೌಡ,ಚಿತ್ರ ನಿರ್ಮಾಪಕರಾದ ಶೋಧನ್ ಪ್ರಸಾದ್,ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ಸುಗಂದರಾಜ್ ಬೇಕಲ್,ಬಿರುವೆರ್ ಕುಡ್ಲ ದುಬೈಯ ಸಂದೀಪ್ ಕೋಟ್ಯಾನ್,ಪೊಲದವರ ಯಾನೆ ಗಟ್ಟಿ ಸಮಾಜ ದುಬೈಯ ಮನೋಜ್ ಬಂಗೆರ, ಯಕ್ಷಗಾನ ಅಭ್ಯಾಸ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ,ಯಕ್ಷಗಾನ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ಕಿನ್ನಿಗೋಳಿ ರವರು ಕಾರ್ಯಕ್ರಮದ ಉದ್ಘಾಟನಾ ದೀಪವನ್ನು ಬೆಳಗಿಸಿ ಉದ್ಘಾಟಿಸಿದರು.
ಆಮಂತ್ರಣ ಪತ್ರಿಕೆ ಮತ್ತು ಟಿಕೆಟ್ ಬಿಡುಗಡೆಗೊಳಿಸಿ ಮಾತನಾಡಿದ ಸರ್ವೋತ್ತಮ ಶೆಟ್ಟಿಯವರು ಕಳೆದ ಒಂಬತ್ತು ವರ್ಷದಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮಗಳನ್ನು ನೋಡುತ್ತ ಬಂದಿದ್ದೇನೆ.ಒಳ್ಳೆಯ ಕಾರ್ಯಕ್ರಮವನ್ನು ನೀಡುತ್ತ ಬಂದಿರುವುದರಿಂದ ಅಭ್ಯಾಸ ಕೇಂದ್ರದ ಕಾರ್ಯಕ್ರಮದ ಯುಎಇಯ ಜನರು ಮೆಚ್ಚುಗೆಯ ಮಾತುಗಳನ್ನು ಆಡುತ್ತಾ ಇದ್ದರೆ.ದಶಮಾನೋತ್ಸವ ಕಾರ್ಯಕ್ರಮ ಇನ್ನಷ್ಟು ಮೆಚ್ಚುಗೆಯನ್ನು ಪಡೆಯಲಿ ಹಾಗೇಯೆ ರಂಗದ ಹಿಂದೆ ನಿರ್ದೆಶನ ಮಾಡುತಿರುವ ಗುರುಗಳಾದ ಶೇಖರ್ ಶೆಟ್ಟಿಗಾರ್ ಮತ್ತು ಶರತ್ ಕುಡ್ಲರವರಿಗೆ ಅಭಿನಂದನೆಗಳು ಸಲ್ಲಿಸುತ್ತ ಜೂನ್ 29 ರಂದು ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಮಾತನಾಡುತ್ತ ಕಳೆದ ಹತ್ತು ವರ್ಷಳಿಂದ ನನ್ನ ಸಂಸ್ಥೆಯಲ್ಲಿ ಯಕ್ಷಗಾನದ ಮುಹೂರ್ತ ಪೂಜೆ ಮತ್ತು ತರಗತಿಗಳು ನಡೆಯುವುದರಿಂದ ಶ್ರೀ ದೇವಿಯ ಸ್ತುತಿಯನ್ನು ವಾರ ವಾರ ಕೆಳುತ್ತ ಇದ್ದೆನೆ.ಹತ್ತನೇ ವರ್ಷದ ಕಾರ್ಯಕ್ರಮದ ಕ್ಷಣಗಣನೆಯಲ್ಲಿ ನಾವೆಲ್ಲ ಇದ್ದೆವೆ ಉತ್ತಮ ಕಾರ್ಯಕ್ರಮವಾಗಿ ಮೂಡಿಬರಲಿ ಎಂದು ಹಾರೈಸಿದರು.ಉಪಸ್ಥಿತರಿದ್ದ ಎಲ್ಲಾ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮಾತನಾಡುತ್ತ ನಮ್ಮ ಹಾಗೂ ನಮ್ಮ ಸಮಾಜದ ಸಂಪೂರ್ಣ ಸಹಕಾರ ಇದೆ ಎಂದು ಹೇಳುತ್ತ ಜೂನ್ ನಲ್ಲಿ ನಡೆಯಲಿರುವ ದಶಮಾನೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರದ ಸಂಚಾಲಕರಾದ ದಿನೇಶ್ ಶೆಟ್ಟಿ ಕೊಟ್ಟಿಂಜ ಮತ್ತು ಕೇಂದ್ರದ ಗುರುಗಳಾದ ಶೇಖರ್ ಡಿ.ಶೆಟ್ಟಿಗಾರ್ ರವರು ಜೂನ್ 29 ರಂದು ಕರಾಮ ಇಂಡಿಯಾನ್ ಸ್ಕೂಲ್ ನ ಶೇಖ್ ರಷೀದ್ ಆಡಿಟೋರಿಯಂನ ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಗೆ ಸಂಜೆ 7‌ ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿರುವುದು.ಬೆಳಿಗ್ಗೆಯಿಂದ ಹತ್ತು ಚೆಂಡೆವಾದಕರಿಂದ ಅಬ್ಬರ ತಾಳ,ಖ್ಯಾತ ಭಾಗವತರಾದ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ,ದೇವಿಪ್ರಸಾದ್ ಆಳ್ವ ತಲಪಾಡಿ,ಶ್ರೀಮತಿ ಕಾವ್ಯ ಶ್ರೀ ಅಜೇರುರವರಿಂದ ಯುಎಇಯಲ್ಲಿ ಮೊತ್ತಮೊದಲ ಬಾರಿಗೆ ಯಕ್ಷ ಗಾಯನ ಸೌರಭ,ಪೂರ್ವರಂಗ ನಂತರ ಯಕ್ಷಗಾನ ಶೋಭಾಯಾತ್ರೆಯೊಂದಿಗೆ ದಶಮಾನೋತ್ಸವದ ಸಭಾಕಾರ್ಯಕ್ರಮ ನಡೆಯಲಿದೆ ಈ ಸಭಾ ಕಾರ್ಯಕ್ರಮದಲ್ಲಿ ಯುಎಇಯ ಹತ್ತು ಮಂದಿ ಸಾಧಕರಿಗೆ ಗೌರವ ಸನ್ಮಾನ ಜರಗಲಿದೆ. ನಂತರ ಕೇಂದ್ರದ ಕಲಾವಿದರು ಹಾಗೂ ಊರಿನ ಪ್ರಖ್ಯಾತ ಕಲಾವಿದರಿಂದ “ಶಿವಾನಿ ಸಿಂಹವಾಹಿನಿ” ಯಕ್ಷಗಾನ ಪ್ರದರ್ಶನ ನಡೆಯಲಿದೆ.ಊರಿನ ಮುಮ್ಮೆಳ ಕಲಾವಿದರಾಗಿ ಪಾವಂಜೆ ಮೇಳದ ಸುಬ್ರಾಯ ಹೊಳ್ಳ ಕಾಸರಗೋಡು ರಕ್ತಬೀಜನ ಪಾತ್ರದಲ್ಲಿ ಹಾಗೂ ಕಟೀಲು ಮೇಳದ ಖ್ಯಾತ ಸ್ತ್ರೀ ಪಾತ್ರದಾರಿ ಅರುಣ್ ಕೋಟ್ಯಾನ್ ಶ್ರೀ ದೇವಿಯಾಗಿ ದುಬೈಯ ಯಕ್ಷಗಾನದ ಅಭಿಮಾನಿಗಳನ್ನು ರಂಜಿಸಲಿದ್ದರೆ.ಭಾಗವತರಾಗಿ ಪಟ್ಲ ಸತೀಶ್ ಶೆಟ್ಟಿ, ದೇವಿಪ್ರಸಾದ್ ಆಳ್ವ ತಲಪಾಡಿ,ಶ್ರೀಮತಿ ಕಾವ್ಯ ಶ್ರೀ ಅಜೇರು,ಕೃಷ್ಣ ಪ್ರಸಾದ್ ರಾವ್ ಸುರತ್ಕಲ್, ಚೆಂಡೆ ಮದ್ದಲೆಯಲ್ಲಿ ಚಂದ್ರಶೇಖರ ಸರಪಾಡಿ,ಸವಿನಯ ನೆಲ್ಲಿತೀರ್ಥ,ಭವಾನಿ ಶಂಕರ ಶರ್ಮ,ಪುತ್ತಿಗೆ ವೆಂಕಟೇಶ ಶಾಸ್ತ್ರಿ, ಚಕ್ರತಾಳದಲ್ಲಿ ಚರಣ್ ರಾಜ್,ಆದಿತ್ಯ ದಿನೇಶ್ ಶೆಟ್ಟಿ ಹಾಗೂ ಪ್ರಸಾದನ ಮತ್ತು ವೇಷ ಭೂಷಣದಲ್ಲಿ ಗಂಗಾಧರ ಡಿ. ಶೆಟ್ಟಿಗಾರ್ ಕಿನ್ನಿಗೋಳಿ, ನಿತಿನ್ ಕುಂಪಲ,ಮನೋಜ್ ಶೆಟ್ಟಿಗಾರ್ ಕಿನ್ನಿಗೋಳಿರವರು ಸಹಕಾರಿಸಲಿದ್ದರೆ.ಸಂಪೂರ್ಣ ಕಾರ್ಯಕ್ರಮದ ನಿರೂಪಣೆಯನ್ನು ಕರಾವಳಿಯ ಪ್ರಸಿದ್ದ ಟಿವಿ ಮಾದ್ಯಮದ ನಿರೂಪಕ ಚೇತನ್ ಶೆಟ್ಟಿಯವರು ನಿರ್ವಾಹಿಸಲಿದ್ದರೆ.ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಕಲಾ ಅಭಿಮಾನಿಗಳಿಗೆ ಮಧ್ಯಾಹ್ನ ಅನ್ನಪ್ರಸಾದ ವಿತರಿಸಲಾಗುವುದು ಎಂದು ದಶಮಾನೋತ್ಸವ ಕಾರ್ಯಕ್ರಮದ ಮಾಹಿತಿಯನ್ನು ನೀಡಿದ್ದರು.
ಕಾರ್ಯಕ್ರಮವನ್ನು ಕೇಂದ್ರದ ಸದಸ್ಯರಾದ ಗಿರೀಶ್ ನಾರಯಣ್ ನಿರೂಪಿಸಿದರು. ದಿನೇಶ್ ಶೆಟ್ಟಿ ಕೊಟ್ಟಿಂಜ ಸ್ವಾಗತಿಸಿ ದನ್ಯವಾದವಿತ್ತರು.
🖋ವಿಜಯಕುಮಾರ್ ಶೆಟ್ಟಿ ಗಾಣದಮೂಲೆ (ದುಬೈ)

LEAVE A REPLY

Please enter your comment!
Please enter your name here