ಶ್ರೀ ಗುತ್ಯಮ್ಮ ಮಾತಂಗ್ಯಮ್ಮನವರ ದೇವಸ್ಥಾನ ಶ್ರೀ ಸತ್ಯಕ್ಷೇತ್ರ ತಲ್ಲೂರಂಗಡಿ ಹೊಸಗದ್ದೆ ತೀರ್ಥಹಳ್ಳಿ ತಾಲ್ಲೂಕಿನ ನೂತನ ಶಿಲಾ ದೇಗುಲದ ಲೋಕಾರ್ಪಣೆ,ಪುನರ್ ಪ್ರತಿಷ್ಠೆ ಹಾಗೂ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಮೇ 6 ರಂದು ದೇವಸ್ಥಾನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ಎ.ಎಂ.ಸದಾನಂದ ಹೆಗ್ಡೆ ಆನಂದೂರು, ಕಾರ್ಯದರ್ಶಿ ಜಿ.ಡಿ. ರವಿರಾಜ್ ಗುಜುಗೊಳ್ಳಿ, ಕೋಶಾಧಿಕಾರಿ ರವಿ ಆನಂದೂರು, ಸಮಿತಿಯ ಸದಸ್ಯರಾದ ವಿನಯ್ ಮಾಕೋಡು, ಅವಿನ್ ಮಲ್ಲಂದೂರು, ಶ್ರೀಮತಿ ಸುಧಾ ರಾಮಪ್ಪ ಹೆಮ್ಮನೆ, ಶ್ರೀಮತಿ ಸುಮಿತ್ರ ಲಕ್ಷಣ ನಾಯ್ಕರು ಅಗಸರಕೋಣೆ, ಟಿ. ಕೆ. ಅರುಣ್ ಕುಮಾರ್ ತಾಲ್ಲೂರಂಗಡಿ, ಅರ್ಚಕರಾದ ಸುದರ್ಶನ್ ಜೋಗಿ, ಜೋಗಿಮನೆ ಹಾಗೂ ಕ್ಷೇತ್ರದ ಅರ್ಚಕ ವೃಂದದವರರು, ಕ್ಷೇತ್ರದ ಪಟ್ಟಿದಾರರು, ಭಕ್ತಾದಿಗಳು ಹಾಗೂ ಊರ ಗ್ರಾಮಸ್ಥರು ಉಪಸ್ಥಿತರಿದ್ದರು.
ತಲ್ಲೂರಂಗಡಿ ಶ್ರೀ ಗುತ್ಯಮ್ಮ ಮಾತಂಗ್ಯಮ್ಮನವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
RELATED ARTICLES