ರಾಜ್ಯಮಟ್ಟದ ಸ್ಕ್ವೇಯ್ ಮಾರ್ಸಲ್ ಆರ್ಟ್ಸ್ ಸ್ಪರ್ಧೆ: ಮರಿಯಂ ನಿಕೇತನ ಶಾಲೆಯ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ ಗೆ ಚಿನ್ನದ ಪದಕ
ವರದಿ ರಾಯಿ ರಾಜ ಕುಮಾರ
ಕರ್ನಾಟಕದ ಸ್ಕ್ವೇಯ್ ಸಂಸ್ಥೆಯು ಗದಗ ಜಿಲ್ಲೆಯಲ್ಲಿ ಆಯೋಜಿಸಿದ ರಾಜ್ಯಮಟ್ಟದ ಸ್ಕ್ವೇಯ್ ಮಾರ್ಶಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಬೆಳುವಾಯಿಯ ಮರಿಯಂ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿ ಇಸ್ಮಾಯಿಲ್ ಮರ್ಝೂಕ್ 18 ವರ್ಷ ವಯೋಮಿತಿಯ 48 ಕೆ.ಜಿ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿನಿಧಿಯಾಗಿ ಭಾಗವಹಿಸಿ ಬಂಗಾರದ ಪದಕ ಪಡೆದು ಜನವರಿ 4 ರಿಂದ 7 ರವರೆಗೆ ಹೈದರಾಬಾದ್ ನ ಗಚಿಬಹುಲಿ ಅಂತರಾಷ್ಟ್ರೀಯ ಸ್ಟೇಡಿಯಂ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಕ್ವೇಯ್ ಮಾರ್ಶಲ್ ಆರ್ಟ್ಸ್ ನಲ್ಲಿ ರಾಜ್ಯದಿಂದ ಪ್ರತಿನಿಧಿಸಲಿದ್ದಾರೆ. ಇವರು ಮೊಹಮ್ಮದ್ ನದೀಮ್ ಹಾಗೂ ಸಫ್ರಾಜ್ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸುತ್ತ ನಮ್ಮ ಶಾಲೆಯ ಕೀರ್ತಿಯನ್ನು ಹೆಚ್ಚಿಸುತ್ತಿದ್ದಾರೆ. ಈಗ ಮಾರ್ಶಲ್ ಆರ್ಟ್ಸ್ ನಲ್ಲೂ ತಮ್ಮ ಪ್ರತಿಭೆ ತೋರಿಸಿ ರಾಜ್ಯ ಮಟ್ಟದಲ್ಲಿ ಬೆಳಗುತ್ತಿರುವುದು ಬಹಳವೇ ಖುಷಿಕೊಟ್ಟಿದೆ. ಹೀಗೆಯೇ ನಮ್ಮ ವಿದ್ಯಾರ್ಥಿಗಳು ಎಲ್ಲೆಡೆ ಸಾಧಿಸುವಂತಾಗಲಿ ಎಂದು ಮರಿಯಂ ನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಜೆಸಿಂತಾ ಲಸ್ರಾದೋ ಮನಸಾರೆ ಹಾರೈಸುತ್ತ ಅಭಿನಂದನೆ ಸಲ್ಲಿಸಿದರು.
.

