ವಿಧಾನ ಪರಿಷತ್ ಶಾಸಕರಾಗಿ ಅಯ್ಕೆಯಾದ ಕೆ.ಪಿ.ಸಿ.ಸಿ. ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು AICC ಕಾರ್ಯದರ್ಶಿ ಪಿ.ವಿ ಮೋಹನ್ ರವರಿಗೆ ಐವನ್ ಡಿʼಸೋಜಾ ಅಭಿನಂದನೆ

0
10

ಮಂಗಳೂರು : ಅನೇಕ ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿ, ಅನೇಕ ರಾಜ್ಯಗಳಲ್ಲಿ ಪಕ್ಷದ ಧ್ವಜವನ್ನು ಎತ್ತಿ ಹಿಡಿದು,ಕೆಲಸ ಮಾಡಿಇದಂತಹ ಇಬ್ಬರು ನಿಷ್ಠಾವಂತ ನಾಯಕರನ್ನು AICC ಗುರುತಿಸಿ ವಿಧಾನ ಪರಿಷತ್ ಶಾಸಕರನ್ನಾಗಿ ನೇಮಕ ಮಾಡಿದ್ದು ಅತ್ಯಂತ ಸಂತೋಷ ತಂದಿದೆ.

ಕಾಂಗ್ರೆಸ್ ಪಕ್ಷ ಕಾರ‍್ಯ ಕ್ರಮ ಮತ್ತು ಜನರ ಬಳಿಗೆ ನ್ಯಾಯಸಮ್ಮತ ಕೆಲಸ ಮಾಡತಕ್ಕಂತಹ ಜಾತ್ಯಾತೀತ ನಾಯಕರುಗಳನ್ನು ಬಯಸುತ್ತಿದೆ.ನಮ್ಮ ರಾಹುಲ್ ಗಾಂಧಿಯವರ ತತ್ವದಡಿಯಲ್ಲಿ ಈ ನೇಮಕಾತಿ ನಡೆದಿರುವುದು ಅತ್ಯಂತ ಸಂತಸದ ವಿಚಾರವಾಗಿದ್ದು, ಆಯ್ಕೆಗೆ ಕಾರರಾದ ನಾಯಕರುಗಳಿಗೆ ಅಭಿನಂದೆನೆ ಸಲ್ಲಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ ದಕ್ಷಿಣ ಕನ್ನಡ ಮೂಲಕ ಇಬ್ಬರು ವಿಧಾನ ಪರಿಷತ್‌ ಗೆ ಆಯ್ಕೆ ಯಾಗಿರುವುದರಿಂದ ಇಲ್ಲಿನ ಬೆಳವಣಿಗೆಗೆ ಸಹಕಾರಿಯಾಗಿದೆ. ಇಲ್ಲಿ ನಡೆಯುವಂತಹ ಎಲ್ಲಾ ಕಾರ‍್ಯಕ್ರಮಗಳು ಹಾಗೂ ಸಾಮಾಜಿಕವಾಗಿ ನಡೆದಯವಂತಹ ಎಲ್ಲಾ ಕಾರ‍್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಬಲ ಬರಲಿದೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.ಮತ್ತು ಶುಭ ಹಾರೈಕೆ ಮಾಡಿದ್ದಾರೆ.

ಕೆ.ಪಿ.ಸಿ.ಸಿ. ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅನೇಕ ವರ್ಷಗಳ ಮೂಲಕ ಪಕ್ಷಕ್ಕೆ ಧಾರೆ ಎರೆಯುವ ಮೂಲಕ ಮುಂದಿನ 2028 ರ ಚುನಾವಣೆಯಲ್ಲಿ ಗೆದ್ದು, ಸರ‍್ಕಾರ ರಚನೆ ಮಾಡಲು ಇದೊಂದು ಒಳ್ಳೆ ಅವಕಾಶ ಎಂದು ದಕ್ಷಿಣ ಕನ್ನಡ ಜಿಲ್ಲೆ ಯ ಜನರು ಇದಕ್ಕೆ ಕೈಗೊಡಿಸಬೇಕೆಂದು ಐವನ್ ಡಿಸೋಜಾರವರು ವಿನಂತಿಸಿದ್ದಾರೆ.ಚುನಾಯಿತ ಪ್ರತಿನಿಧಿಗಳಿಗೆ ಅಭಿನಂಧಿಸಿದ್ದಾರೆ.

LEAVE A REPLY

Please enter your comment!
Please enter your name here