ಮಂಗಳೂರು : ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಅವರು ಇಂದು ಮಂಗಳೂರು ಮಹಾನಗರ ಪಾಲಿಕೆಯ ಜೆಪ್ಪು 59ನೇ ವರ‍್ಡ್‌ನಲ್ಲಿ ಮಹಾತ್ಮಾ ಗಾಂಧಿ ನಗರ ಅಭಿವೃದ್ಧಿ ಯೋಜನೆ 2 ನೇ ಹಂತದ ಕಾಮಗಾರಿಯ ಅಡಿಯಲ್ಲಿ ಜೆಪ್ಪು ಸೆಮಿನರಿ ವ್ಯೂ ಸಂರ‍್ಕ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಭೂಮಿಪೂಜೆ ನೆರವೇರಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ೨ನೇ ಯೋಜನೆಯಡಿ ಮಂಜೂರಾದ೧೬೫ ಕೋಟಿ ವಿಶೇಷ ಅನುದಾನದಲ್ಲಿ ಕಾಮಗಾರಿಗಳನ್ನು ಇತ್ತೀಚೆಗೆ ರಾಜ್ಯದ ನಗರಾಭಿವೃದ್ದಿ ಸಚಿವರು ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ರವರ ಕಾಮಗಾರಿ ಚಾಲನೆಯೊಂದಿಗೆ ಸದ್ರಿ ಕಾಮಗಾರಿಗಳ ಪ್ರಾರಂಭಿಸಲಾಗುವುದು ಸದ್ರಿ ಕಾಮಗಾರಿಯನ್ನು ವಿಧಾನ ಪರಿಷತ್ ಶಾಸಕರಾದ ಐವನ್ ಡಿʼಸೋಜಾ ಸ್ಥಳೀಯರೊಂದಿಗೆ ಕಾಮಗಾರಿ ವೀಕ್ಷಿಸಿದರು.

ಅಭಿವೃದ್ದಿ ಕಾಮಗಾರಿಗಳಿಗೆ ಸ್ಥಳೀಯರು ತಮ್ಮ ಸಹಕಾರದೊಂದಿಗೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಮಯದಲ್ಲಿ ನೀರು ಹರಿಯುವ ಚರಂಡಿಗಳ ಬಗ್ಗೆ ಮುಗಿಸುವಂತೆ ಹಾಗೂ ಮುಂದೆ ಆಗುವ ಅಭಿವೃದ್ದಿ ಕಾಮಗಾರಿಗಳಿಗೆ ತೊಂದೆರೆಯಾಗದಂತೆ ಅಗತ್ಯಕ್ರಮ ಕೈಗೊಳ್ಳಬೇಕೆಂದು ಹಾಗೂ ಕಾಮಗಾರಿಗಳನ್ನು ಶೀಘ್ರ ಕಾಂಟ್ರೆಕ್ಟರ್ ರವರಿಗೆ ನರ‍್ದೇಶನ ನೀಡಿದ್ದಾರೆ.
ಈ ಸಂದರ‍್ಭದಲ್ಲಿ ಮಾಜಿ ಕರ‍್ಪೊರೇರ‍್ಗಳಾದ ಭಾಸ್ಕರ್ ರಾವ್, ಅಪ್ಪಿ ಲತಾ, ನಾಗೇಂದ್ರ ಕುಮಾರ್, ಸತೀಶ ಪೆಂಗಲ್, ಕಾಂಗ್ರೆಸ್ ಮುಖಂಡರಾದ ಅನಿಲ್ ತೋರಸ್, ವಿದ್ಯಾ, ಹಬೀಬುಲ್ಲಾ ಕಣ್ಣೂರು, ಶ್ರೀಧರ್ ಜಪ್ಪಿನಮೊಗೇರು ಹಾಗೂ ಸ್ಥಳೀಯರಾದ ಸುನೀತಾ, ಅಶೋಕ್ ತಾವ್ರೋ, ಸಿಸ್ಟರ್ ಸುಮನಾ, ಅಬ್ದುಲ್ ಅಜೀಜ್, ರೌಫ್, ಮಾಯಾ, ಸೆಲೈನ್ ಡಿಸೋಜಾ, ಥಾಮಸ್ ಡಿಸೋಜಾ, ಅನಿಲ್ ಲೋಬೋ, ಅನಿತಾ ಮತ್ತು ಕರ‍್ಮಿನಾ ಉಪಸ್ಥಿತರಿದ್ದರು.

