ಕಿನ್ನಿಗೋಳಿ : ತುಳು ಭಾಷೆ, ಸಂಸ್ಕೃತಿ ಮತ್ತು ನಾಡಿನ ಉನ್ನತಿಗಾಗಿ ಶ್ರಮಿಸುತ್ತಿರುವ ಪ್ರತಿಷ್ಠಿತ ಸಂಘಟನೆ ‘ಜೈ ತುಲುನಾಡ್ (ರಿ.)’ ಇದರ ವಾರ್ಷಿಕ ಮಹಾಸಭೆಯು ದಿನಾಂಕ 18.01.2026 ರಂದು ಕಿನ್ನಿಗೋಳಿಯ ರೋಟರಿ ಕ್ಲಬ್ ಸಭಾಂಗಣದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಭೆಯಲ್ಲಿ 2026-27ನೇ ಸಾಲಿನ ಅವಧಿಗೆ ನೂತನ ಕೇಂದ್ರ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘಟನೆಯ ನೂತನ ಅಧ್ಯಕ್ಷರಾಗಿ ಅಶ್ವತ್ ತುಲುವೆ ಅವರು ಆಯ್ಕೆಯಾದರು.
ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳು :
ಅಧ್ಯಕ್ಷರು-ಅಶ್ವತ್ ತುಲುವೆ , ಉಪಾಧ್ಯಕ್ಷರುಗಳು-ಸುಶೀಲ ಕೊಡವೂರು, ವಿಶಾಲ್ ಕೊಡಿಯಾಲ್ ಮತ್ತು ಮನೀಶ್ ಕುಮಾರ್,ಪ್ರಧಾನ ಕಾರ್ಯದರ್ಶಿ- ಸುಕೇಶ್ ಕೆಮ್ಮಾಯಿ, ಸಹ ಕಾರ್ಯದರ್ಶಿಗಳು-ಚಿತ್ರಾಕ್ಷಿ ಮುಗೇರ ತೆಗ್ಗು ಮತ್ತು ಪೂರ್ಣಿಮಾ ಶೆಟ್ಟಿಗಾರ್, ಖಜಾಂಚಿ- ನಿಶಿಲ್ ಶೆಟ್ಟಿ ಬೇಲಾಡಿ,ಸಹ ಖಜಾಂಚಿ-ನಾಗರಾಜ ಶೆಟ್ಟಿಗಾರ್,ಸಂಘಟನಾ ಕಾರ್ಯದರ್ಶಿ-ನಿರಂಜನ್ ಕರ್ಕೇರ,ಸಹ ಸಂಘಟನಾ ಕಾರ್ಯದರ್ಶಿಗಳು-ಅಶ್ವಿತಾ ಮತ್ತು ಸಂಗೀತಾ,ಕಾರ್ಯಕಾರಿ ಸಮಿತಿ ಸದಸ್ಯರು-ಚಂದ್ರ ತುಲುವೆ ಮತ್ತು ಚೈತ್ರ ಎನ್.
ಅಂಗಸಂಸ್ಥೆಯ ಜವಾಬ್ದಾರಿಗಳು:
ಸಂಘಟನೆಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ವೇಗ ನೀಡಲು ಅಂಗಸಂಸ್ಥೆಯ ಮುಖ್ಯಸ್ಥರನ್ನು ನೇಮಕ ಮಾಡಲಾಗಿದೆ.
‘ಬರವುದ ಬಿತ್ತ್‌ಲ್’ (ಸಾಹಿತ್ಯ ವಿಭಾಗ) ಅಧ್ಯಕ್ಷರು: ಸವಿತ ಕರ್ಕೆರ ಕಾವೂರು.
‘ಲೇಲೇಲೇಗ’ (ಸಾಂಸ್ಕೃತಿಕ ವಿಭಾಗ) ಅಧ್ಯಕ್ಷರು: ಪೂರ್ಣಿಮಾ ಬಂಟ್ವಾಳ.
ನೂತನ ಅಧ್ಯಕ್ಷರಾದ ಅಶ್ವತ್ ತುಲುವೆ ಅವರು ಮಾತನಾಡುತ್ತಾ, ಮುಂಬರುವ ವರ್ಷದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ತುಳುನಾಡಿನ ಸಂಸ್ಕೃತಿಯನ್ನು ಪಸರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
