ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಮಹಾಸಭೆ : ಪ್ರತಿಭಾ ಪುರಸ್ಕಾರ – ಸನ್ಮಾನ

0
82


“ವಿಶ್ವಕರ್ಮರು ಸ್ವಾವಲಂಭಿಗಳಾಗಬೇಕು : ಕರುಣಾಕರ ಆಚಾರ್ಯ

ಹೆಬ್ರಿ : ವಿಶ್ವಕರ್ಮರು ನಮ್ಮ ಪ್ರತಿಭೆಗಳಿಂದ ನಾವು ಸ್ವಾವಲಂಭಿಗಳಾಗಿ ಸಾಧನೆ ಮಾಡಿದಾಗ ನಮ್ಮ ಕುಟುಂಬ ಸ್ವಾವಲಂಭಿಯಾಗುತ್ತದೆ. ಆಗ ಮಾತ್ರ ನಾವು ಸಮಾಜದಲ್ಲಿ ಉನ್ನತಿಯಾಗಲು ಸಾಧ್ಯವಿದೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಕೂಡ ಇಂದಿನ ಅಗತ್ಯ. ಆರೋಗ್ಯ ಇದ್ದರೆ ಮಾತ್ರ ಜೀವನ ಸಾಧನೆ ಮಾಡಲು ಸಾಧ್ಯ ಎಂದು ದೊಂಡೆರಂಗಡಿ ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಕರುಣಾಕರ ಜೆ. ಆಚಾರ್ಯ ಹೇಳಿದರು.

ಅವರು ಭಾನುವಾರ ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ವತಿಯಿಂದ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘ ಮತ್ತು ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯ ಸಹಕಾರದಲ್ಲಿ ನಡೆದ ೨೧ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ನಮ್ಮ ವಿಶ್ವಕರ್ಮ ಸಮುದಾಯದ ಯುವಕರು ನಮ್ಮ ಪಾರಂಪರಿಕ ಪಂಚ ಕುಲಕಸುಬಗುಗಳನ್ನು ಉಳಿಸಿ ಬೆಳೆಸುವ ಕಾರ್ಯ ನಡೆಸಬೇಕು. ಕುಲ ಕಸುಬುಗಳಿಗೆ ಈಗ ಅತ್ಯಂತ ಬೇಡಿಕೆ ಮತ್ತು ಸಮಾಜದಲ್ಲಿ ಅತ್ಯುನ್ನತ ಗೌರವವಿದೆ. ಕೌಶಲ್ಯವಿರುವವರು ಕುಲಕಸುಬುಗಳನ್ನು ಉದ್ಯೋಗದಲ್ಲಿ ಆಯ್ಕೆ ಮಾಡಕೊಳ್ಳಬೇಕು ಎಂದು ರಜತ ಶಿಲ್ಪಿ ಬಾರ್ಕೂರು ಕಲ್ಚಪ್ರ ಶ್ರೀಕಾಂತ್‌ ಆಚಾರ್ಯ ಹೇಳಿದರು.

ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಅಧ್ಯಕ್ಷ ಸಂತೋಷ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಂಗ ನಿರ್ದೇಶಕ ರಾಜೇಶ ಆಚಾರ್ಯ ಪರ್ಕಳ, ರಜತ ಶಿಲ್ಪಿ ಶ್ರೀಕಾಂತ ಆಚಾರ್ಯ ಕಲ್ಚಪ್ರ ಬಾರ್ಕೂರು, ಪ್ರಗತಿಪರ ಕೃಷಿಕ ದಾಮೋದರ ಆಚಾರ್ಯ ಯರ್ಲಪಾಡಿ, ಬಾಲ ಪ್ರತಿಭೆ ಸಾನಿಧ್ಯ ಆಚಾರ್ಯ ಪೆರ್ಡೂರು, ಉಡುಪಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಹೆಚ್.ಎಂ.ಶಶಿಶಂಕರ್‌ ಆಚಾರ್ಯ, ರಂಗ ನಟನ ನಿರ್ದೇಶಕ ವಿ.ಆರ್.ಸತೀಶ ಆಚಾರ್ಯ ವರಂಗ, ಪಿಯುಸಿ ಶೈಕ್ಷಣಿಕ ಸಾಧಕಿ ನವ್ಯಶ್ರೀ ಅವರಿಗೆ ಸನ್ಮಾನ ನಡೆಯಿತು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಣೆ ನಡೆಯಿತು. ರವೀಂದ್ರ ಪುರೋಹಿತ್‌ ಹೆಬ್ರಿ ನೇತ್ರತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಿತು.

ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದ ಸಹಶಿಕ್ಷಕಿ ಸೌಮ್ಯ ಡಿ., ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಕೇಶವ ಆಚಾರ್ಯ ಮುದ್ರಾಡಿ, ಮಹಿಳಾ ಮಂಡಳಿಯ ಅಧ್ಯಕ್ಷೆ ಪ್ರೇಮಾ ಎಂ ಆಚಾರ್ಯ, ಹೆಬ್ರಿ ಶ್ರೀ ವಿಶ್ವಕರ್ಮ ಯುವ ವೃಂದದ ಪದಾಧಿಕಾರಿಗಳಾದ ಅರವಿಂದ ಆಚಾರ್ಯ ಕಾರ್ಕಳಜಡ್ಡು, ಪ್ರಸನ್ನ ಆಚಾರ್ಯ ಮಠದಬೆಟ್ಟು, ನವೀನ್‌ ಆಚಾರ್ಯ ಅಡಲ್‌ ಬೆಟ್ಟು, ಸಚಿನ್‌ ಆಚಾರ್ಯ ಮೇಲ್ಪೇಟೆ ಹೆಬ್ರಿ, ಭುವನೇಂದ್ರ ಆಚಾರ್ಯ ಎಡಂಬಳ್ಳಿ, ರಘುವೀರ ಆಚಾರ್ಯ ಗಿಲ್ಲಾಳಿ, ಸಂಘದ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಉಪಸ್ಥಿತರಿದ್ದರು. ಭುವನೇಂದ್ರ ಆಚಾರ್ಯ ನಿರೂಪಿಸಿ ಪ್ರಸನ್ನ ಆಚಾರ್ಯ ವರದಿ ಮಂಡಿಸಿ ನವೀನ್‌ ಆಚಾರ್ಯ ಸ್ವಾಗತಿಸಿದರು.

LEAVE A REPLY

Please enter your comment!
Please enter your name here