“ಜೈ ತುಲುನಾಡ್(ರಿ.) ಉಡುಪಿ” ಘಟಕದ ವಾರ್ಷಿಕ ಮಹಾಸಭೆಯು ಜನವರಿ 04ರ ಭಾನುವಾರದಂದು ಉಡುಪಿಯ ಹಿಂದಿ ಪ್ರಚಾರ ಭವನದಲ್ಲಿ ನಡೆಯಿತು.
ತುಳುನಾಡಿನ ಅಧಿದೇವತೆಯ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಸಭೆಯಲ್ಲಿ 2024-2025 ನೇ ಸಾಲಿನಲ್ಲಿ ನಡೆದ ಸಂಘದ ಕಾರ್ಯಚಟುವಟಿಕೆಗಳ ವರದಿಯನ್ನು ಜೊತೆ ಕಾರ್ಯದರ್ಶಿಯವರಾದ ಸುಪ್ರೀತಾ ಪುತ್ರನ್ ಮಲ್ಪೆ ಮತ್ತು ಸಮಿತಿಯ ವಾರ್ಷಿಕ ಲೆಕ್ಕಾಚಾರದ ವರದಿಯನ್ನು ಕೋಶಾಧಿಕಾರಿಯಾದ ಸುಪ್ರಿಯಾ ಅಖಿಲೇಶ್ ದೇವಾಡಿಗ ಬೈಲೂರು ನೀಡಿದರು. ಹಾಗೆಯೇ ಸಂಘದ ಅಧ್ಯಕ್ಷರಾದ ಸುಶೀಲಾ ಜಯಕರ್ ಕೊಡವೂರ್ ಇವರು ಕಳೆದ ಸಾಲಿನಲ್ಲಿ ನಡೆದ ಕಾರ್ಯಕ್ರಮಗಳ ಮಾಹಿತಿ ಹಂಚಿಕೊಂಡರು.
ನಂತರ 2026-2027 ಸಾಲಿನ ಸಮಿತಿ ರಚನೆಯ ಸಲುವಾಗಿ ನಡೆದ ಮತದಾನ ಪ್ರಕ್ರಿಯೆಯನ್ನು ಸ್ಥಾಪಕ ಸಮಿತಿಯ ಸದಸ್ಯರಾದ ಶರತ್ ಕುಮಾರ್ ಕೊಡವೂರ್ ನಡೆಸಿಕೊಟ್ಟರು.
ಅದರಂತೆ 2026-2027 ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಸಂತೋಷ್.ಎನ್.ಎಸ್ ಕಟಪಾಡಿ, ಉಪಾಧ್ಯಕ್ಷರಾಗಿ ವಿರೇಂದ್ರ ಶೆಟ್ಟಿ ಕೊಡಂಕೂರು, ಕಾರ್ಯದರ್ಶಿಯಾಗಿ ಪ್ರಜ್ಞಾಶ್ರೀ.ಎಂ ಕೊಡವೂರು, ಜೊತೆ ಕಾರ್ಯದರ್ಶಿಯಾಗಿ ಐಶ್ವರ್ಯ ಶೆಟ್ಟಿ ಇನ್ನಂಜೆ, ಕೋಶಾಧಿಕಾರಿಯಾಗಿ ಅಂಬಿಕಾ ರಾವ್ ಕನ್ನರ್ಪಾಡಿ, ಜೊತೆ ಕೋಶಾಧಿಕಾರಿಯಾಗಿ ಡಾ|ನಿತೇಶ್.ಎಸ್.ಎ ಕೊರಂಗ್ರಪಾಡಿ, ಸಂಘಟನಾ ಕಾರ್ಯದರ್ಶಿಯಾಗಿ ಸುಪ್ರಿಯ ಅಖಿಲೇಶ್ ದೇವಾಡಿಗ ಬೈಲೂರ್, ಜೊತೆಸಂಘಟನಾ ಕಾರ್ಯದರ್ಶಿಯಾಗಿ ಶಿವಪ್ರಸಾದ್ ದೇವಾಡಿಗ ಮಣಿಪಾಲ್ ಆಯ್ಕೆಯಾದರು.
ಈ ಸಂಧರ್ಭದಲ್ಲಿ ಸಮಿತಿಯ ಹಿರಿಯರೂ ಹಾಗೂ ವಕೀಲರಾದ ರಮೇಶ್ ದೇವಾಡಿಗ ಬೈಲೂರು , ಶೇಖರ್ ಮಲ್ಪೆ ಹಾಗೆಯೇ ಜೈ ತುಲುನಾಡ್(ರಿ.)ಉಡುಪಿ ಘಟಕದ ಸದಸ್ಯರು ಪಾಲ್ಗೊಂಡಿದ್ದರು.
– ವರದಿ ವಿನೋದ್ ಶೆಟ್ಟಿ ಉಡುಪಿ

