ಉಡುಪಿ : ಜ.14 ರಂದು ಉಗ್ಗೆಲ್ ಬೆಟ್ಟುವಿನಲ್ಲಿ ಮಕರ ಸಂಕ್ರಮಣ ಪೂಜೆ

0
70

ಉಡುಪಿ ಜಿಲ್ಲೆ ಉಗ್ಗೆಲ್ ಬೆಟ್ಟುವಿನಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ಬೈದೇರು ಹಾಗೂ ಚಿಕ್ಕಮ್ಮ ದೇವಿ ಗರಡಿಯಲ್ಲಿ ಮಕರ ಸಂಕ್ರಮಣ ಪೂಜೆ ದಿನಾಂಕ 14-01-2026 ಬುಧವಾರ ಭಕ್ತಿಭಾವದಿಂದ ಜರುಗಲಿದೆ.

ಬೆಳಿಗ್ಗೆ 11 ಗಂಟೆಗೆ ಹಸರಣೆ ಪೂಜೆ, ಮಧ್ಯಾಹ್ನ 12 ಗಂಟೆಗೆ ಚಿಕ್ಕಮ್ಮ ದೇವಿ ದರ್ಶನ, ನಂತರ 12.30 ಗಂಟೆಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

ಈ ಪುಣ್ಯ ಕಾರ್ಯದಲ್ಲಿ ಕ್ಷೇತ್ರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.

ವರದಿ: ವಿನೋದ್ ಶೆಟ್ಟಿ, ಉಡುಪಿ

LEAVE A REPLY

Please enter your comment!
Please enter your name here