ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಇವರು ಉಪ್ಪೂರು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ಭೇಟಿ

0
182

ಬ್ರಹ್ಮಾವರ : ಜನ ಸೇವಾ ಚಾರಿಟೇಬಲ್ ಟ್ರಸ್ಟ್ ಕುಂದಾಪುರ ಇವರು ಉಪ್ಪೂರು ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನಸೇವಾ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಐಶ್ವರ್ಯ ಶೆಟ್ಟಿಯವರು ಸ್ಪಂದನ ಸಂಸ್ಥೆ ಹೆಸರೇ ಸೂಚಿಸುವಂತೆ ಮುಗ್ಧ ನಗುವಿನಿಂದ ಸ್ಪಂದಿಸುವ ಸುಂದರ ಮನಸುಗಳ ವಿದ್ಯಾರ್ಥಿಗಳನ್ನು ಭೇಟಿಯಾಗಿರುವುದು ಒಂದು ಅವಿಸ್ಮರಣೀಯ ಅನುಭವವಾಗಿದ್ದು, ಮಾನಸಿಕ ಸವಾಲುಗಳ ಹೊರತಾಗಿಯೂ ಅವರ ಕಾರ್ಯ ಚಟುವಟಿಕೆಗಳು ನಿಜಕ್ಕೂ ಅಚ್ಚರಿಗೊಳಿಸಿದೆ ಎಂದು ವಿದ್ಯಾರ್ಥಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸ್ಪಂದನ ಸಂಸ್ಥೆಯ ಸಂಸ್ಥಾಪಕರಾದ ಜನಾರ್ದನ್ ಹಾಗೂ ಅಕ್ಷತಾ ಸಾಯಿಪ್ರಸಾದ್ ಚೌಟ, ಸಾನ್ವಿ ಚೌಟ, ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಾಗೂ ಮಧ್ಯಾಹ್ನದ ಭೋಜನವನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here