ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನಮೊಗರು ಇದರ ೧೭ನೇ ರ‍್ಷದ ಜಪ್ಪಿನಮೊಗರು ಗಣೇಶೋತ್ಸವ ಆಮಂತ್ರಣ ಪತ್ರಿಕೆಯು ಬ್ರಹ್ಮಶ್ರೀ ನಾರಾಯಣ ಗುರುಮಂದಿರ (ರಿ.) ಸಭಾಂಗಣ ಜಪ್ಪಿನಮೊಗರು ಇಲ್ಲಿ ಶ್ರೀ ಜಯಶೀಲಾ ಅಡ್ಯಂತಾಯ ಸಭಾಧ್ಯಕ್ಷತೆಯಲ್ಲಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ವಿನೂತನ ಶೈಲಿಯಲ್ಲಿ ದೇವರ ರಥದಲ್ಲಿ ಆಮಂತ್ರಣ ಪತ್ರವನ್ನು ತಂದು ಅಂಬಿಕಾ ಸುನಿಲ್ ಮತ್ತು ಸುನಿಲ್ ಕುಮಾರ್‌ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಮಾಜಿ ಕರ‍್ಫೋರೇಟರ್ ಅಧ್ಯಕ್ಷರು ಜೆ. ನಾಗೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿ ಸವಾಗತಿಸಿದರು. ಸುಧಾಕರ್ ಜೆ. ಧನ್ಯವಾದವಿತ್ತರು. ಹರೀಶ್ ತರ‍್ದೋಲ್ಯ ಮತ್ತು ಕವಿತಾ ಗಂಗಾಧರ್ ಕರ‍್ಯಕ್ರಮ ನಿರೂಪಿಸಿದರು.
ಸುಭಾಷ್ ವಿ. ಅಡಪ, ಬಾಲಕೃಷ್ಣ ಶೆಟ್ಟಿ, ಪ್ರವೀಣ್ ತಂದೊಳಿಗೆ ಶಕೀಲಾ ಶೆಟ್ಟಿ ಮಾ| ಸುಧಾಂಶು ವಿ. ಶೆಟ್ಟಿ, ಮಾ| ಕವೀಶ್ ಮತ್ತಿತರು ಉಪಸ್ಥಿತರಿದ್ದರು.