
ಮೂಡುಬಿದಿರೆ : ಜವನೆರ್ ಮಾಸ್ತಿಕಟ್ಟೆ ತಂಡ, ಮಾಸ್ತಿಕಟ್ಟೆ–ಮೂಡುಬಿದಿರೆ ಇದರ ವತಿಯಿಂದ ಸೆಪ್ಟೆಂಬರ್ 26ರಂದು ಶನಿವಾರ ತಡರಾತ್ರಿ ಸಿದ್ದಕಟ್ಟೆ ರಾಯಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರಿಗೆ ತಂಪು ಪಾನೀಯ ವಿತರಿಸುವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.

ಪಾದಯಾತ್ರೆಯಲ್ಲಿ ಸಾಗುತ್ತಿದ್ದ ಭಕ್ತರಿಗೆ ಮಾರ್ಗಮಧ್ಯೆ ತಂಪು ಪಾನೀಯ ವಿತರಿಸಿ, ಅವರ ಪ್ರಯಾಣಕ್ಕೆ ನೆರವಾಗುವ ಮೂಲಕ ತಂಡದ ಸದಸ್ಯರು ಮಾನವೀಯತೆ ಮೆರೆದರು.
ಸೇವಾ ಮನೋಭಾವದೊಂದಿಗೆ ನಡೆದ ಈ ಕಾರ್ಯವು ಜವನೆರ್ ಮಾಸ್ತಿಕಟ್ಟೆ ತಂಡದ ಸಮಾಜಮುಖಿ ಚಟುವಟಿಕೆಗೆ ಮತ್ತೊಂದು ಉತ್ತಮ ಉದಾಹರಣೆಯಾಯಿತು.

ಈ ಸಂದರ್ಭದಲ್ಲಿ ತಂಡದ ಅಧ್ಯಕ್ಷ ಪ್ರವೀಣ್ ಹಾಗೂ ಅವರ ಮಗಳು ಪ್ರಣವಿ, ತಂಡದ ಸದಸ್ಯರಾದ ಲೋಕೇಶ್, ಶಂಕರ್, ಗಣೇಶ್, ಸತೀಶ್, ಆನಂದ್, ಸಂಪತ್ ಸೇರಿದಂತೆ ಇತರ ತಂಡದ ಸದಸ್ಯರು ಉಪಸ್ಥಿತರಿದ್ದರು.

