ಜನತಾದಳ (ಸಂಯುಕ್ತ) ಕರ್ನಾಟಕ ಪಕ್ಷದ ವತಿಯಿಂದ ದಿನಾಂಕ 12-05-2025 ರಂದು ದಾವಣಗೆರೆ ನಗರದ ಪಕ್ಷದ ಕಛೇರಿಯಲ್ಲಿ ನಡೆದ ಜಿಲ್ಲಾ ಕಾರ್ಯಕಾರಿ ಪದಾಧಿಕಾರಿಗಳ ಸಭೆಯಲ್ಲಿ ಶ್ರೀ ಜಯಣ್ಣ ಹೆಚ್. ಇವರನ್ನು ದಾವಣಗೆರೆ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಜನತಾದಳ (ಸಂಯುಕ್ತ) ಕರ್ನಾಟಕ ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮಾ ಜೆ. ಪಟೇಲ್, ಜಿಲ್ಲಾ ಸಂಚಾಲಕರಾದ ಎಂ.ಡಿ. ನೀಲಗಿರಿಯಪ್ಪ ಇವರ ಸೂಚನೆ ಮೇರೆಗೆ ಶ್ರೀ ಜಯಣ್ಣ ಹೆಚ್. ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.