ಮೂಡಬಿದಿರೆ: ಜೆಸಿಐ ಮುಂಡ್ಕೂರು ಭಾರ್ಗವ ಘಟಕಕ್ಕೆ ವಲಯ ಅಧ್ಯಕ್ಷ ಅಭಿಲಾಶ್ ಬಿ.ಎ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಜರಗಿತು. ಜೇಸಿ ಮುಂಡ್ಕೂರು ಭಾರ್ಗವ ವಸಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಶ್ವತ ಯೋಜನೆಗಳಾದ ಸಚ್ಚೇರಿಪೇಟೆ ಸಮೀಪ ಗಾಂಧಡ್ಪು ರಸ್ತೆಗೆ ಹಾಕಿರುವ ದಾರಿ ನಾಮಫಲಕ, ಕಡಂದಲೆ ವಿದ್ಯಾರ್ಥಿ ನಿಲಯದಲ್ಲಿ ಹಾಕಿರುವ ನೂತನ ಧ್ವಜಸ್ತಂಭ ಹಾಗೂ ಕಡಂದಲೆ ಪಲ್ಕೆ ಮತ್ತು ವಿದ್ಯಾ ಗಿರಿ ಆಟೋ ನಿಲ್ದಾಣಕ್ಕೆ ಪ್ರಥಮ ಚಿಕಿತ್ಸೆ ಕೊಡುಗೆಗಳ ಉದ್ಘಾಟನೆ ನಡೆಯಿತು.
ವಲಯ ಅಧ್ಯಕ್ಷರನ್ನು ಸಾಂಪ್ರದಾಯಿಕವಾಗಿ ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಸ್ವಾಗತಿಸಲಾಯಿತು. ಬಳಿಕ ವಲಯಾಧ್ಯಕ್ಷರು ಶ್ರೀದೇವಿಯ ದರ್ಶನ ಪಡೆದರು.
ರಾತ್ರಿ ಕಡಂದಲೆ ಶ್ರೀ ಸುಬ್ರಮಣ್ಯ ಸ್ವಾಮಿ ಪ್ರೌಡ ಶಾಲೆ ಸಭಾಂಗಣದಲ್ಲಿ ವಲಯದ ಅಧ್ಯಕ್ಷರ ಅಧಿಕೃತ ಬೇಟಿಯ ಸಭಾ ಕಾರ್ಯಕ್ರಮ ನಡೆಯಿತು. ಜೆಸಿ ಪೂರ್ವ ಅಧ್ಯಕ್ಷ ಸುರೇಂದ್ರ ಭಟ್ ಭಟ್, ಹಾಗೂ ಜೇಸಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ: ಜಗದೀಶ್ ಪೂಜಾರಿ ಕಡಂದಲೆ

