ಗೇರುಕಟ್ಟೆ, ಕಳಿಯ ನ್ಯಾಯತರ್ಪು ಗ್ರಾಮಗಳಲ್ಲಿ ಕೆಲವು ವರ್ಷಗಳಿಂದ ಈಚೆಗೆ ಕೆರೆಬಾವಿಗಳಲ್ಲಿ ಶವವಾಗಿ ಪತ್ತೆಯಾಗಿದ್ದ ನಾಲ್ವರ ವ್ಯಕ್ತಿಗಳ ನಿಗೂಢ ಸಾವಿನ ಆರೋಪಿಗಳ ಪತ್ತೆ ಇನ್ನೂ ಕೂಡ ನಡೆದಿಲ್ಲ. ಹೀಗಾಗಿ ಸುಮಂತನ ನಿಗೂಢ ಕೊಲೆ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯವೂ ಸಹಾ ಇದೇ ರೀತಿ ಮರೀಚಿಕೆ ಆಗಬಹುದೋ ಎಂಬ ಅನುಮಾನವನ್ನು ಇದೀಗ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಈ ಹಿಂದೆ ಗೇರುಕಟ್ಟೆ ಪೇಟೆಗೆ ತಾಗಿಕೊಂಡಿರುವ ಕೆರೆ ಒಂದರಲ್ಲಿ ಓರ್ವ ಹಿಂದಿ ಭಾಷೆ ಮಾತನಾಡುವ ಯುವಕನ ಶವವವೊಂದು ಸಿಕ್ಕಿತ್ತು. ಅದೇ ರೀತಿ ಅನಂತರ ಕೆಲ ಸಮಯಗಳ ಬಳಿಕ ಇದೇ ಕೆರೆಯಲ್ಲಿ ಹಲವು ಪ್ರಕರಣಗಳ ಆರೋಪಿ ಎನ್ನಲಾಗುತ್ತಿರುವ ಫಾರೂಕ್ ಎಂಬಾತನ ಶವವೂ ಸಹ ಇದೇ ರೀತಿ ಸಿಕ್ಕಿರುತ್ತದೆ.
ಇದಾದ ಬಳಿಕ ಇತ್ತೀಚೆಗೆ ಅಂದರೆ ಕಳೆದ ಆಗಸ್ಟ್ ನಲ್ಲಿ ಕಣಿಯೂರು ಗ್ರಾಮದ ಕುಂಡ ಗುರಿ ನಿವಾಸಿ ಕೊರಗು ಎಂಬ ವರ ಪುತ್ರ ಶ್ರೀಧರ ಎಂಬ ವಿವಾಹಿತ ಯುವಕನ ಶವವು ಕೂಡ ಇದೇ ರೀತಿ ಅನುಮಾನ ಆಸ್ಪದವಾಗಿ ಕೆರೆಯ ಒಳಗೆ ಸಿಕ್ಕಿತ್ತು. ಆದರೆ ಈವರೆಗೂ ಈ ಎಲ್ಲಾ ಅಸಹಜ ಸಾವುಗಳ ನಿಜವಾದ ಕಾರಣ ಮತ್ತು ಆರೋಪಿಗಳು ಯಾರೆಂಬುದರ ಬಗ್ಗೆ ಈವರೆಗೂ ತಿಳಿದು ಬಂದಿಲ್ಲ.
ಈ ಎಲ್ಲಾ ಪ್ರಕರಣಗಳ ಮಧ್ಯೆ ಕಳೆದ ಹತ್ತು ದಿನಗಳ ಹಿಂದೆ ವಿಜ್ಞಾನಿಯಾಗಬೇಕೆಂದು ಕನಸು ಕಂಡಿದ್ದ ವಿದ್ಯಾರ್ಥಿ ಸುಮಂತನ ಶವವೂ ಕೂಡ ಇದೇ ರೀತಿ ಸ್ಥಳೀಯ ಕೆರೆಯ ಒಳಗೆ ಪತ್ತೆಯಾಗಿದೆ. ಪೊಲೀಸರು ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಹಗಲಿರುಳು ಶತ ಪ್ರಯತ್ನ ನಡೆಸುತ್ತಿದ್ದರೂ ಕೂಡ ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ ಎನ್ನಲಾಗುತ್ತಿದೆ.
ಹೀಗಾಗಿ ಈ ಹಿಂದಿನ ಪ್ರಕರಣಗಳಂತೆ ಸುಮಂತನ ಕೊಲೆ ಪ್ರಕರಣವೂ ಸಹಾ ಹಳ್ಳ ಹಿಡಿದು ಆತನ ನಿಗೂಢ ಸಾವಿಗೆ ನ್ಯಾಯ ಮರೀಚಿಕೆಆಗಬಹುದೇ ನೋ ಮರೀಚಿಕೆ ಆಗಬಹುದೇನೋ ಎಂಬ ಅನುಮಾನವನ್ನು ಇದೀಗ ಈ ಪ್ರದೇಶದ ಜನರೆಲ್ಲರೂ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ.

