ಮೂಡುಬಿದಿರೆ: ತಾಲೂಕಿನ ಕಡಂದಲೆ ಗ್ರಾಮದ ವಿಕಲಚೇತನ ಕುಮಾರಿ ಕೀರ್ತಿಕಾ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಜನ ಮಂಗಳ ಕಾರ್ಯಕ್ರಮ ದಡಿಯಲ್ಲಿ ವಾಟರ್ ಬೆಡ್ ನ್ನು ತಾಲೂಕಿನ ಯೋಜನಾಧಿಕಾರಿ ಧನಂಜಯ ರವರು ವಿತರಿಸಿದರು.
ಒಕ್ಕೂಟದ ಪದಾಧಿಕಾರಿ ಸುಶೀಲ ಹಾಗೂ ತಾಲೂಕಿನ ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಹಾಗೂ ಸೇವಾಪ್ರತಿನಿಧಿ ವಸಂತಿ ಉಪಸ್ಥಿತರಿದ್ದರು.

