ಜನವರಿ 23 ಮತ್ತು 24 ರಂದು ಕೈಲಾಜೆ ಅತ್ತೂರು ಕಾರ್ಕಳದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಂಪ್ರತಿ ವರ್ಧಂತಿ ಉತ್ಸವ ಹಾಗೂ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ನಡೆಯಲಿದೆ.
ಈ ಸಂದರ್ಭದಲ್ಲಿ ವಿಶೇಷ ಪೂಜೆಗಳು, ಅಭಿಷೇಕ, ಅಲಂಕಾರ ಸೇವೆ, ದೈವಗಳ ಸಿರಿ ಮುಡಿ ನೇಮ, ಗಂಧ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಉತ್ಸವದ ಎರಡೂ ದಿನಗಳಲ್ಲಿ ಭಕ್ತರಿಗೆ ದೇವರ ಗಂಧ ಪ್ರಸಾದ ಹಾಗೂ ದೈವಗಳ ಸಿರಿ ಮುಡಿ ಗಂಧ ಪ್ರಸಾದ ಸ್ವೀಕರಿಸುವ ಅವಕಾಶ ಇರುತ್ತದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ವಿನಂತಿಸಿದ್ದಾರೆ.

ವರದಿ – ಅರುಣ್ ಭಟ್ ಕಾರ್ಕಳ

