ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಭಜನ ಮಂದಿರ ಟ್ರಸ್ಟ್ (ರಿ.) ಕಕ್ಕುಂಜೆ ಉಡುಪಿ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಯವರ ೧೭೧ನೇ ಜನ್ಮ ದಿನಾಚರಣೆ ಮತ್ತು ದಾನಿಗಳ ಸಹಕಾರದಲ್ಲಿ ಗುರುಶ್ರೀ ವಿದ್ಯಾನಿಧಿ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಸೆ. ೭ರಂದು ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಭಜನ ಮಂದಿರದ ಅಧ್ಯಕ್ಷರಾದ ನರೇಶ್ ಕುಮಾರ್ ಕಕ್ಕುಂಜೆ ವಹಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ನಿರಂತರ ಸಹಕಾರ ಕೋರಿದರು. ಮುಖ್ಯ ಅತಿಥಿಯಾಗಿ ಕಕ್ಕುಂಜೆ ಶ್ರೀ ಬ್ರಹ್ಮಬೈದರ್ಕಳ ಮತ್ತು ಪರಿವಾರ ದೈವಗಳ ಗರೋಡಿ ಇದರ ಅಧ್ಯಕ್ಷರಾದ ಭಾಸ್ಕರ ಡಿ. ಸುವರ್ಣ ಅವರು ಭಾಗವಹಿಸಿ, ಶುಭ ಕೋರಿದರು. ಕ್ಲಾಸಿಕ್ ಬಿಲ್ಡರ್ಸ್ ನ ಪ್ರಭಾಕರ ಜಿ., ಕುಸುಮಾ ತಿಮ್ಮಪ್ಪ ಸುವರ್ಣ ಕಕ್ಕುಂಜೆ, ವನಜಾ ಪ್ರಭಾಕರ ಪಾಲನ್ ಕಕ್ಕುಂಜೆ ಹಾಗೂ ಚಿಮುಣಿ ಪೂಜಾರಿ ಕಕ್ಕುಂಜೆ, ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಭಜನ ಮಂದಿರ ಟ್ರಸ್ಟ್ ನ ಗೌರವಾಧ್ಯಕ್ಷ ಪ್ರಭಾಕರ ಜಿ., ಗೌರವ ಉಪಾಧ್ಯಕ್ಷ ಮಹೇಶ್ ಪಿ., ಮಹಿಳಾ ಘಟಕದ ಅಧ್ಯಕ್ಷೆ ಹೇಮಾವತಿ, ಕಾರ್ಯದರ್ಶಿ ಆಶಾ ಕೃಷ್ಣ, ಅರ್ಚಕ ಕುಡ್ಪ ಪೂಜಾರಿ, ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಗುರುಶ್ರೀ ವಿದ್ಯಾನಿಧಿ ವಿತರಣೆ-ಸನ್ಮಾನ
ಸಮಾರಂಭದಲ್ಲಿ ಗುರುಶ್ರೀ ವಿದ್ಯಾರ್ಥಿವೇತನ ವಿತರಿಸಲಾಯಿತು. ವಿದ್ಯಾನಿಧಿಗೆ ಮುಖ್ಯ ಅತಿಥಿ ಭಾಸ್ಕರ ಡಿ. ಸುವರ್ಣರವರು ರೂ. 50 ಸಾವಿರ, ಕುಸುಮಾ ತಿಮ್ಮಪ್ಪ ಸುವರ್ಣ ಕಕ್ಕುಂಜೆ, ವನಜಾ ಪ್ರಭಾಕರ ಪಾಲನ್ ಕಕ್ಕುಂಜೆ ಹಾಗೂ ಚಿಮುಣಿ ಪೂಜಾರಿ ಕಕ್ಕುಂಜೆ ತಲಾ ರೂ. 25 ಸಾವಿರ ದೇಣಿಗೆ ನೀಡಿದರು. ಭರತನಾಟ್ಯದಲ್ಲಿ ವರ್ಲ್ಡ್ ರೆಕಾರ್ಡ್ ಮಾಡಿರುವ ಬ್ರಹ್ಮಾವರದ ದೀಕ್ಷಾ ವಿ. ಅವರನ್ನು ಸನ್ಮಾನಿಸಲಾಯಿತು
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಭಜನ ಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೃಷ್ಣ ಶ್ರೀಧರನ್ ಸ್ವಾಗತಿಸಿ, ನಿರೂಪಿಸಿದರು. ಟ್ರಸ್ಟ್ ಉಪಾಧ್ಯಕ್ಷ ರಾಜೇಶ್ ಪೂಜಾರಿ ವಂದಿಸಿದರು.

