ಕನ್ನಡ ಸಂಘ ಬಹರೇನ್ ಪದಗ್ರಹಣ; ಜಾದೂ ಪ್ರಸ್ತುತಪಡಿಸಿದ ಕುದ್ರೋಳಿ ಗಣೇಶ್

0
345

ಕನ್ನಡ ಸಂಘ ಬಹರೇನ್ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಜಾದೂಗಾರ ಕುದ್ರೋಳಿ ಗಣೇಶ್ ಪ್ರಸ್ತುತಪಡಿಸಿದ ಮ್ಯಾಜಿಕ್ – ಮೈಂಡ್ – ಮಿಸ್ಟರಿ ಕಾರ್ಯಕ್ರಮ ಪ್ರೇಕ್ಷಕರಿಗೆ ವಿಭಿನ್ನ ರಂಜನೆ ನೀಡಿತು.
ಕರ್ನಾಟಕ ಸರಕಾರದ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡುರಾವ್ , ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷರಾದ ಡಾ.ಆರತಿ ಕೃಷ್ಣ ಸೇರಿದಂತೆ ಹಲವು ಗಣ್ಯರು ಜಾದೂ ಪ್ರದರ್ಶನ ಆನಂದಿಸಿದರು.
ಮನಾಮದಲ್ಲಿರುವ ಬಹರೇನ್ ಕಲ್ಚರಲ್ ಹಾಲ್ ನಲ್ಲಿನಡೆದ ಸಮಾರಂಭದಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕನ್ನಡಿಗರು ಕುದ್ರೋಳಿ ಗಣೇಶ್ ರವರ ಮೈಂಡ್ ಮ್ಯಾಜಿಕ್ ಸಮ್ಮೋಹಿನಿಗೆ ಬೆರಗಾದರು. ಮನಸ್ಸಿನ ಭಾವನೆಗಳನ್ನು ಓದುವ ಚಮತ್ಕಾರವನ್ನು  ಕಂಡು ಅಚ್ಚರಿಗೊಂಡರು.
ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಕುದ್ರೋಳಿ ಗಣೇಶ್ , ನನ್ನ ಬದುಕಿನ ಮೊದಲನೇ ವಿದೇಶ ಪ್ರಯಾಣ ಬಹರೇನ್ ಆಗಿದ್ದು, 1997 ರಲ್ಲಿ ಪ್ರದರ್ಶನ ಸೇರಿದಂತೆ ಮೂರನೇ ಬಾರಿಗೆ ಬರೇನ್ ಕನ್ನಡಿಗರೊಂದಿಗೆ ಬೆರೆಯಲು ಅವಕಾಶ ಸಿಕ್ಕಿದ್ದು ಸಂತಸ ತಂದಿದೆ ಎಂದು ಹೇಳಿದರು. ಬೆಹರೇನ್ ಕನ್ನಡ ಸಂಘದ ನೂತನ ಅಧ್ಯಕ್ಷರಾದ ಅಜಿತ್ ಬಂಗೇರಾ ಇವರು ಕುದ್ರೋಳಿ ಗಣೇಶ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here