ಗ್ರಾಮೀಣ ಪ್ರದೇಶದಲ್ಲಿ ಕಲಾಕುಂಚ ಶಾಖೆ ಹೆಮ್ಮೆ – ಜಗದೀಶ್.ಸಿ.ಎಸ್.

0
49

ದಾವಣಗೆರೆ : ಎಲೆಮರೆಯ ಕಾಯಿಗಳನ್ನು ಹಣ್ಣುಗಳಾಗಿ ಅಭಿವೃದ್ಧಿಗೊಳಿಸಿ ನಾಲ್ಕುಗೋಡೆಯ ಮದ್ಯದಲ್ಲಿ ಇರುವ ಮಹಿಳೆಯರ ಪ್ರತಿಭೆಗಳನ್ನು ಅನಾವರಣಗೊಳಿಸುವ ಮುಕ್ತವಾದ ವೇದಿಕೆಗಳನ್ನು ಕಲ್ಪಿಸುವ ಸಂಸ್ಥೆ ಕಲಾಕುಂಚ ಅತ್ತಿಗೆರೆ ಗ್ರಾಮೀಣ ಪ್ರದೇಶದಲ್ಲಿ ಈ ಸಂಸ್ಥೆ ಶಾಖೆ ಮಾಡಿದ್ದು ಹೆಮ್ಮೆಯ ಸಂಗತಿ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಅವರ ಸಾಧನೆಗೆ ಪೂರಕ ಎಂದು ಅತ್ತಿಗೆರೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಜಗದೀಶ್ ಸಿ.ಎಸ್. ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು.

ಇತ್ತೀಚಿಗೆ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವತಿಯಿಂದ ದಾವಣಗೆರೆ ಜಿಲ್ಲೆಯ ಅತ್ತಿಗೆರೆ ಗ್ರಾಮೀಣ ಪ್ರದೇಶದ ಕಲಾಕುಂಚ ಶಾಖೆಯ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಲಾಕುಂಚ ಸಂಸ್ಥೆಯ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈಯವರು ಮಾತನಾಡಿ, ಒಂದು ಸಂಘಟನೆ ಸುಲಭದ ಮಾತಲ್ಲ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ, ಪೂರ್ವ ಸಿದ್ಧತೆಯೊಂದಿಗೆ ತೊಡಗಿಸಿಕೊಂಡರೆ ಸಂಘಟನೆಗಳು ಬೆಳೆಯುತ್ತಾ ಹೋಗುತ್ತದೆ.

ಸಂಕುಚಿತ ಭಾವನೆ ಬಿಟ್ಟು ವಿಶಾಲವಾದ ಸೇವಾ ಮನೋಭಾವನೆ ಇದ್ದರೆ ಅದೇ ದೇವರಸೇವೆ. ಕಲಾಕುಂಚ ಗ್ರಾಮೀಣ ಪ್ರದೇಶದ ಈ ಶಾಖೆಯ ಈ ಸಮಾರಂಭ ಅತ್ಯದ್ಭುತವಾಗಿ ವಿಜೃಂಭಣೆಯಿಂದ ಮಕ್ಕಳು, ಮಹಿಳೆಯರು ಮನೋರಂಜನೆಯೊಂದಿಗೆ ನಡೆದಿದ್ದು ತುಂಬಾ ತುಂಬಾ ಸಂತೋಷವಾಯಿತು ಎಂದರು.

ಸಮಾರಂಭದ ವೇದಿಕೆಯಲ್ಲಿ ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಜ್ಯೋತಿ ಗಣೇಶ್ ಶೆಣೈ, ಕಲಾಕುಂಚ ಸಿದ್ದವೀರಪ್ಪ ಬಡಾವಣೆಯ ಶಾಖೆಯ ಅಧ್ಯಕ್ಷರಾದ ಲಲಿತಾ ಕಲ್ಲೇಶ್, ಕಲಾಕುಂಚ ಎಂ.ಸಿ.ಸಿ.ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಗೌರವ ಉಪಸ್ಥಿತರಾಗಿ ಕಲಾಕುಂಚ ಅತ್ತಿಗೆರೆ ಶಾಖೆ ನೂತನ ಅಧ್ಯಕ್ಷರಾದ ಶೈಲಜಾ ಪ್ರಶಾಂತ್ ದಂಪತಿಗಳು, ಕಲಾಕುಂಚ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಕೆ.ಸಿ.ಉಮೇಶ್ ದಂಪತಿಗಳು ಇದ್ದರು.

ಕಲಾಕುಂಚ ಗ್ರಾಮೀಣ ಪ್ರದೇಶದ ಅತ್ತಿಗೆರೆ ಶಾಖೆಯ ಅಧ್ಯಕ್ಷರು ಸೇರಿದಂತೆ ಸಮಿತಿ ಸದಸ್ಯರು ಸಂಪ್ರಾದಾಯಿಕವಾಗಿ ಅಚ್ಚುಕಟ್ಟಾಗಿ ಸಂಸ್ಕೃತಿ, ಸಂಸ್ಕಾರದೊಂದಿಗೆ ಮುತ್ತೆöÊದೆಯರಿಗೆ ಉಡಿ ತುಂಬಿದರು. ಮಕ್ಕಳಿಗೆ ಸಾಮೂಹಿಕ ಭಜನೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳು ನೆರೆದ ಪ್ರೇಕ್ಷಕರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.

ಅತ್ತಿಗೆರೆಯ ಶ್ರೀ ವೀರಭದ್ರೇಶ್ವರ ನಿಲಯ ಸಭಾಂಗಣದಲ್ಲಿ ನಡೆದ ಈ ವೈಭವದ ಸಮಾರಂಭಕ್ಕೆ ಕುಮಾರಿ ನಿಧಿ ಬಿ. ಪ್ರಾರ್ಥನೆ ಮಾಡಿದರು. ಕುಮಾರಿ ವೈಷ್ಣವಿ ಪಿ. ಸ್ವಾಗತಿಸಿದರು. ಕುಮಾರಿ ಜಾನವಿ ಸಿ.ಆರ್. ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಿರೂಪಣೆ ಮಾಡಿದರು. ಕೊನೆಯಲ್ಲಿ ಧರಣಿ ಟಿ.ಎಂ. ವಂದಿಸಿದರು.

LEAVE A REPLY

Please enter your comment!
Please enter your name here