ದಾವಣಗೆರೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಹಾಗೂ ಕಲಾಕುಂಚ ಮಹಿಳಾ ವಿಭಾಗದ ಸಂಯುಕ್ತಾಶ್ರಯದಲ್ಲಿ ದಸರಾ ಹಬ್ಬದ ಪ್ರಯುಕ್ತ ದಾವಣಗೆರೆಯ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಅಕ್ಟೋಬರ್ ೫ ರಂದು ಭಾನುವಾರ ಬೆಳಿಗ್ಗೆ ೧೦ ಗಂಟೆಗೆ ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ ಸಾರ್ವಜನಿಕವಾಗಿ ಆಟೋಟ ಸ್ಪರ್ಧೆ, ರಸರಂಜನೆ, ಪ್ರಶ್ನೋತ್ತರ ವಿವಿಧ ಸ್ಪರ್ಧೆಗಳನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಹೆಚ್. ಮಂಜುನಾಥ್ ತಿಳಿಸಿದ್ದಾರೆ.
ದಿನಾಂಕ ೩೦-೯-೨೦೨೫ರೊಳಗೆ ಈ ಕೆಳಗಿನ ವ್ಯಾಟ್ಸಪ್ ಸಂಖ್ಯೆಗೆ ಹೆಸರು ನೊಂದಾಯಿಸಬೇಕೆAದು ಕಲಾಕುಂಚ ಮಹಿಳಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಪ್ರಕಟಿಸಿದ್ದಾರೆ. ಅವಕಾಶ ವಂಚಿತರಾದ ಪ್ರತಿಭಾವಂತ ಪ್ರತಿಭೆಗಳನ್ನು ಅನಾವರಣಗೊಳಿಸಲು ಮುಕ್ತವಾದ ವೇದಿಕೆಯನ್ನು ಕಲ್ಪಿಸುವ ಸದುದ್ದೇಶದಿಂದ ಈ ಸಮಾರಂಭ ಮಾಡಲಾಗಿದ್ದು ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಪ್ರತಿಭಾವಂತರು ಹೆಸರು ನೊಂದಾಯಿಸಬೇಕಾಗಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ಉಮೇಶ್ ವಿನಂತಿಸಿದ್ದಾರೆ. ಹೆಸರು ನೊಂದಾಯಿಸುವ ವ್ಯಾಟ್ಸಪ್ ಸಂಖ್ಯೆ : ೯೯೪೫೭೮೫೧೭೦, ೯೭೪೩೮೯೭೫೭೮.

