ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ “ಕಾವ್ಯ ಕುಂಚ” 5ನೇ ಭಾಗದ ಕವನ ಸಂಕಲನ ಇತ್ತೀಚಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೋಹಳ್ಳಿ ಗ್ರಾಮದ ಪುಸ್ತಕ ಮನೆಯ ಗ್ರಂಥಾಲಯದಲ್ಲಿ ಲೋಕಾರ್ಪಣೆ ಸಮಾರಂಭ ಯಶಸ್ವಿಯಾಗಿ ನಡೆಯಿತು ಎಂದು ಕವನ ಸಂಕಲನ ಪ್ರಧಾನ ಸಂಪಾಕರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಪುಸ್ತಕ ಮನೆ ಬಳಗದ ಅಧ್ಯಕ್ಷರಾದ ಸದಾಶಿವ ಹರಪಾಳೆ ಈ ಕವನ ಸಂಕಲನ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪಿ.ಕೆ.ಪಿ.ಎಸ್. ಅಧ್ಯಕ್ಷರಾದ ರೇವಣಸತ್ತಿ ನಿರ್ದೇಶಕರಾದ ಕೇದಾರಿ ವಳಸಂಗ, ಗ್ರಾಮ ಪಂಚಾಯಿತಿ ಸದಸ್ಯರಾದ ತುಕರಾಂ ದೇವಖಾಎ, ಸಿಕಂದರ್ ಮುಜಾವರ್, ಸೋಮಣ್ಣ ಝರೆ, ಪತ್ರಕರ್ತರಾದ ಶಶಿ ಪುಂಡಿಫಲ್ಲೆ, ಪ್ರಕಾಶ್ ಬಿರಾದಾರ, ಶಿಕ್ಷಕರಾದ ವಿನಾಯಕ ಹಿರೇಮಠ, ಸುರೇಶ್ ಹಾಲಳ್ಳಿ, ಪುಸ್ತಕ ಮನೆಯ ಸದಸ್ಯರಾದ ಪುರಂದರ ನಾಟೀಕರ್, ಮಾಂತೇಶ್ ಭೋಸಲೆ ಸಹದೇವ ಸೂರ್ಯವಂದೆ, ಹಣಮಂತ ಗಬ್ಬೂರು ಸೈನಿಕರಾದ ಬಾಳೇಶ್ ಮರಗಾಳೆ, ಯುವ ಕವಿ ಬೀರಪ್ಪ ಡಂಬಳಿ ಮುಂತಾದವರು ಉಪಸ್ಥಿತರಿದ್ದರು.