Tuesday, April 22, 2025
HomeUncategorizedಏ.11ರಂದು ಪಚ್ಚಿಲೆ ಕ್ಷೇತ್ರೋತ್ಸವ

ಏ.11ರಂದು ಪಚ್ಚಿಲೆ ಕ್ಷೇತ್ರೋತ್ಸವ

ಕರಾವಳಿ ಕೃಷಿ ಸಂಶೋಧನಾ ಸಂಸ್ಥೆ(ICAR-CCARI)-ಗೋವಾ, ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯತ್-ಉಡುಪಿ, ಕೃಷಿ ಇಲಾಖೆ-ಉಡುಪಿ, ಮೀನುಗಾರಿಕೆ ಇಲಾಖೆ-ಉಡುಪಿ, ಭಾ.ಕೃ.ಅ.ಪ ಕೃಷಿ ವಿಜ್ಞಾನ ಕೇಂದ್ರ-ಬ್ರಹ್ಮಾವರ, ಅರಬ್ಬಿ ಸಮುದ್ರ ಮೀನುಗಾರಿಕೆ ನಿರ್ವಹಣೆ ಸಮನ್ವಯ ಸಮಿತಿ, SCODWES ಸಂಸ್ಥೆ, ಆಯುಶ್ಚಾನ್ ಭವ ಸಂಸ್ಥೆ, ಉಡುಪಿಕಿನಾರ ಮೀನುಗಾರರ ಉತ್ಪಾದಕ ಕಂಪನಿ ನಿಯಮಿತ. ಮತ್ತು ಅಮೃತೇಶ್ವರಿ ರೈತ ಉತ್ಪಾದಕ ಕಂಪನಿ ನಿಯಮಿತ. ಜಂಟಿಯಾಗಿ ಆಯೋಜಿಸಿರುವ ಪಚ್ಚಿಲೆ ಕ್ಷೇತ್ರೋತ್ಸವ ಕಾರ್ಯಕ್ರಮವು 11 ಏಪ್ರಿಲ್ 2025 ಶುಕ್ರವಾರ ಬೆಳಿಗ್ಗೆ 10.30ಕ್ಕೆ ಕನ್ಯಾಣ ಹೊಸ ಸೇತುವೆ ಕೆಳಗೆ ಕೋಡಿ ಕನ್ಯಾಣದಲ್ಲಿ ನಡೆಯಲಿದೆ. ಹಾಗೂ ಮತ್ಸ್ಯ ಕೃಷಿಯಲ್ಲಿ ಸಾಧನೆ ಮಾಡಿದ ಕೃಷಿಕರನ್ನು ಗುರುತಿಸಿ ಗೌರವಿಸಿಲಾಗುವುದು.

ಚಟುವಟಿಕೆಗಳು

* ಪಚ್ಚಿಲೆ ಕಟಾವು

* ಪಚ್ಚಿಲೆ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ

* ಸಂಶೋಧನ ವಿಜ್ಞಾನಿಗಳು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಮೀನು ಕೃಷಿಕರ ಸಂವಾದ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: .: 9538505031

RELATED ARTICLES
- Advertisment -
Google search engine

Most Popular