ಬಂಟ್ವಾಳ: ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ಸುಧೆಕಾರು ಲೀಲಾ ಕೃಷ್ಣಪ್ಪ ಇವರ ಮಗನಾಧ ಹರೀಶ್ ಇವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರ ಚಿಕಿತ್ಸೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ಸಹಾಯಧನ 25 ಸಾವಿರ ರೂಪಾಯಿ ನೀಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯದ ಮೇಲ್ವಿಚಾರಕ ಸುಕರಾಜ್, ಕಲ್ಲಡ್ಕ ಒಕ್ಕೂಟದ ವಲಯ ಅಧ್ಯಕ್ಷೆ ತುಳಸಿ, ಶೌರ್ಯ ವಿಪತ್ತು ಕಲ್ಲಡ್ಕ ಘಟಕ ಅಧ್ಯಕ್ಷ ಮಾದವ ಸಾಲಿಯಾನ್, ಸೇವಾಪ್ರತಿನಿಧಿಗಳಾದ ವಿದ್ಯಾ, ಗಣೇಶ್, ವಿಜಯ ಲಕ್ಷ್ಮಿ, ಒಕ್ಕೂಟ ಅಧ್ಯಕ್ಷೆರುಗಳಾದ ಮಮತಾ ಉಮಾವತಿ, ಮಮತಾ, ಒಕ್ಕೂಟದ ಪದಾಧಿಕಾರಿಗಳು ಉಷಾ, ಬೇಬಿ , ಸಂತೋಷ್ ಉಪಸ್ಥಿತರಿದ್ದರು.