ಕಂಬಳಕಟ್ಟ – ಕೊಡವೂರು : 12ನೇ ವಾರ್ಷಿಕ ಅಧಿವೇಶನ ಕಾರ್ಯಕ್ರಮ

0
93

ವರದಿ ವಿನೋದ್ ಶೆಟ್ಟಿ ಉಡುಪಿ

ಯುವಬಂಟರ ಸಂಘ ಕಂಬಳಕಟ್ಟ -ಕೊಡವೂರು ಇದರ 12ನೇ ವಾರ್ಷಿಕ ಅಧಿವೇಶನ ಕಾರ್ಯಕ್ರಮ ಕಂಬಳಕಟ್ಟದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡಿತು.ಅಧಿವೇಶನದ ಸಭಾಕಾರ್ಯಕ್ರಮವನ್ನು ಅತಿಥಿ ಅಭ್ಯಾಗತರೊಡಗೂಡಿ ದೀಪ ಪ್ರಜ್ವಲಿಸಿ ಉದ್ಘಾಟನೆಗೈದರು.

ಸಂಘದ ಗೌರವ ಸ್ವೀಕರಿಸಿ ಮಾತನಾಡಿದ ಮುಖ್ಯ ಅತಿಥಿ 92.7 Big FM ಮಂಗಳೂರು ಇದರ RJ ನಯನ ಶೆಟ್ಟಿ ಸಂಘ ಸಂಸ್ಥೆಗಳಲ್ಲಿ ನಮ್ಮನ್ನ ನಾವು ತೊಡಗಿಸಿ ಕೊಂಡರೆ ನಮಗರಿವಿಲ್ಲದೆ ಸಂಘ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ.ಮೊಬೈಲ್ ಲೋಕದಲ್ಲಿ ಮುಳುಗಿರುವ ಈಗಿನ ಯುವಜನತೆಯನ್ನೂ ಸಂಘಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವುದು ಹಿರಿಯರಾದ ನಮ್ಮೆಲ್ಲರ ಕರ್ತವ್ಯ ಎಂದರು.

ಈ ಸಂದರ್ಭದಲ್ಲೀ ಸಂತೋಷ್ ಶೆಟ್ಟಿ ಪಂಚರತ್ನ ಇವರನ್ನು ಕಂಬಳಕ್ಷೇತ್ರ, ದಿನೇಶ್ ಶೆಟ್ಟಿ ಬಾವಲಿಮನೆ ಇವರನ್ನು ಕೃಷಿಕ್ಷೇತ್ರ,ಆಯುರ್ವೇದ ವೈದ್ಯಕೀಯ ಶಿಕ್ಷಣ ಪೊರೈಸಿದ ಡಾlನಿಕ್ಷಿತಾ.ಆರ್. ಶೆಟ್ಟಿ ಕಂಬಳಕಟ್ಟ, ವಿದ್ಯಾರ್ಥಿಗಳಾದ ಸಾಂಜಲಿ ಶೆಟ್ಟಿ ಮೂಡುಬೆಟ್ಟು ಪರವಾಗಿ ಅವರ ಪೋಷಕರಿಗೆ ,ಜೇಷ್ಣಾ ಶೆಟ್ಟಿ ಬುಡ್ನಾರು , ಧೃತಿಜ ಶೆಟ್ಟಿ ಮೂಡುಬೆಟ್ಟು,ಇವರುಗಳನ್ನು ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಗುರುತಿಸಿ ಗೌರವಿಸಲಾಯಿತು. ಹಾಗೂ ಅರ್ಹ ಫಲಾನುಭಾವಿಗಳಿಗೆ ಆರ್ಥಿಕ ಸಹಾಯಧನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.ಇತ್ತೀಚೆಗೆ ನಮ್ಮನ್ನಗಲಿದ ಸಂಘದ ಹಿತೈಷಿ ಮಾರ್ಗದರ್ಶಕರುಗಳದ ಕೊಡಂಕೂರು ಭಾಸ್ಕರ್ ಶೆಟ್ಟಿ, ಹಾಗೂ ಕಪ್ಪೆಟ್ಟು ಗುಂಡು ಶೆಟ್ಟಿ ಅವರುಗಳ ಆತ್ಮಕ್ಕೆ ಚಿರಶಾಂತಿ ಕೋರಿ ಮೌನಪ್ರಾರ್ಥನೆ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಪುಷ್ಪರಾಜ್.ಕೆ ಶೆಟ್ಟಿ ಅಧ್ಯಕ್ಷತೆ ವಹಿಸಿದ ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ ,ಉದ್ಯಮಿ ಪ್ರವೀಣ್ ಶೆಟ್ಟಿ ಪುತ್ತೂರು, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷ ಹರಿಪ್ರಸಾದ್ ರೈ, ಶಿರ್ವಬಂಟರ ಸಂಘದ ಅಧ್ಯಕ್ಷ ಸಾಯಿನಾಥ್ ಶೆಟ್ಟಿ,ಉದ್ಯಮಿ ಸಂಜೀವ ಶೆಟ್ಟಿ ಕಪ್ಪೆಟ್ಟು ,ಹಿರಿಯರಾದ ಜಗನ್ನಾಥ ಶೆಟ್ಟಿ ದೊಡ್ಡಮನೆ,ರಾಜು ಶೆಟ್ಟಿ ಜನ್ನಿಬೆಟ್ಟು ,ಸಂಘದ ಗೌರವಾದ್ಯಕ್ಷರುಗಳಾದ ಸಂತೋಷ ಶೆಟ್ಟಿ ಪಂಚರತ್ನ, ಕೆ. ಶಿವಪ್ರಸಾದ್ ಶೆಟ್ಟಿ ಮಜಲುಮನೆ, ಅಶ್ವಿನಿ ಶೆಟ್ಟಿ ಸಂತೆಕಟ್ಟೆ,ಸಂಘಟನಾ ಅಧ್ಯಕ್ಷ ಸುರೇಶ್ ಶೆಟ್ಟಿ ಕಂಬಳಕಟ್ಟ, ಪ್ರಧಾನ ಕಾರ್ಯದರ್ಶಿ ವಿಜೇಶ್.ಆರ್.ಶೆಟ್ಟಿ ಜನ್ನಿಬೆಟ್ಟು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಂಘದ ಮಹಿಳಾ ಸದಸ್ಯರಿಂದ ಭಕ್ತಿ ಗಾಯನ , ಸದಸ್ಯರುಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಂಗತರಂಗ ಕಲಾವಿದರು, ಕಾಪು ಸದಸ್ಯರಿಂದ ಅಧ್ಯಕ್ಷೆರ್ ನಾಟಕ ಪ್ರದರ್ಶನಗೊಂಡಿತು.

ಅಶ್ವಿನಿ ಶೆಟ್ಟಿ ಸಂತೆಕಟ್ಟೆ ಸ್ವಾಗತಿಸಿ, ವಿಜೇಶ್. ಆರ್. ಶೆಟ್ಟಿ ಜನ್ನಿಬೆಟ್ಟು ಪ್ರಸ್ತಾವನೆಗೈದರು ,ಖಜಾಂಚಿ ರಾಕೇಶ್ ಶೆಟ್ಟಿ ಕಂಬಳಕಟ್ಟ ವಂದಿಸಿದರು. ಸುಮಿತ್ರಾ ಶೆಟ್ಟಿ ಜನ್ನಿಬೆಟ್ಟು ಪ್ರಾರ್ಥನೆಗೈದರು, ಅಮೃತ್ ಶೆಟ್ಟಿ ಕಂಬಳಕಟ್ಟ, ಸುರೇಖಾ ಶೆಟ್ಟಿ ಬಾವಲಿಮನೆ ಹಾಗೂ ಸಂಗೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


LEAVE A REPLY

Please enter your comment!
Please enter your name here