ಸುಳ್ಯ ದ ಹೆಮ್ಮೆಯ ಬಾಲಪ್ರತಿಭೆ ಯ ಮಡಿಲಿಗೆ *ಕಾರಂತ ಬಾಲ ಪುರಸ್ಕಾರ*

0
56

ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ: ಸುಳ್ಯದ ಬಹುಮುಖ ಪ್ರತಿಭೆ ಅಶ್ವಿಜ್ ಅತ್ರೇಯ ಸುಳ್ಯ ಪಡೆದುಕೊಂಡಿದ್ದಾರೆ.

ಇದೇ ನವಂಬರ್ 30 ನಡೆದ ಕೋಟ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನದ ವತಿಯಿಂದ ನೀಡುವ ಐದನೇ ವರ್ಷದ ಡಾ. ಶಿವರಾಮ ಕಾರಂತ ಬಾಲ ಪುರಸ್ಕಾರ ಕ್ಕೆ ಸುಳ್ಯದ ಬಹುಮುಖ ಪ್ರತಿಭೆಯಾದ ಬಾಲನಟ ಬಾಲಗಾಯಕ ಅಶ್ವಿಜ್ ಅತ್ರೇಯ ಸುಳ್ಯ ಇವರು ಪಡೆದುಕೊಂಡಿದ್ದಾರೆ.

ಪ್ರೌಢ ಶಾಲಾ ವಿಭಾಗದಲ್ಲಿ ಆಯ್ಕೆ ಆದ ಇವರು ಪ್ರಭು ಬುಕ್ ಸೆಂಟರ್ ನ ಮಾಲಕರಾದ ಉಷಾ ರಾಮಚಂದ್ರ ಇವರ ಸುಪುತ್ರ ನಾಗಿದ್ದು ಸುಳ್ಯ ಸೈಂಟ್ ಜೋಸೆಫ್ ಶಾಲೆಯ
8ನೇ ತರಗತಿ ವಿದ್ಯಾರ್ಥಿ ಇವರು ನಟನೆ ಗಾಯನ ಸಂಗೀತ ,ಮಾಡೆಲಿಂಗ್ ಕ್ಷೇತ್ರದಲ್ಲಿ ಟೀನ್ ಇಂಡಿಯಾ 2024 ಫಿನಾಲೆ ಹಂತ ಕ್ಕೆ ಡೆಲ್ಲಿ ಗೆ ಆಯ್ಕೆ ಆಗಿದ್ದರು ಹಾಗೂ ಕಿಡ್ಸ್ ಫ್ಯಾಷನ್ ಫೈನಲ್ ಶೋ ನೀಡಿರುತ್ತಾರೆ ಮಿಮಿಕ್ರಿಯಲ್ಲಿ ಪ್ರತಿಭಾ ಕಾರಂಜಿ ಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದರು ಹೀಗೆ ಹಲವಾರು ಬಹುಮುಖ ಕ್ಷೇತ್ರದಲ್ಲಿ ಸಾಧನೆ ಮಾಡುತಿರುವ ಇವರು ಎಳವೇ ಯಲ್ಲಿಯೇ ಪ್ರಖ್ಯಾತ ಟಿ.ವಿ.ಚಾನೆಲ್ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ ಮೌನರಾಗ ಧಾರಾವಾಹಿಯಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಅಧ್ಭುತ ನಟನೆಯಿಂದ ರಾಜ್ಯದಾದ್ಯಂತ ಗುರುತಿಸಿ ಕೊಂಡ ಬಾಲಕ . ಇತ್ತೀಚೆಗೆ ಬಿಡುಗಡೆಯಾದ ರವಿಕೆ ಪ್ರಸಂಗ ಚಲವಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಬೆಳ್ಳಿತೆರೆಯಲ್ಲಿ ತನ್ನ ಅಮೋಘ ಅಭಿನಯದಿಂದ ಪ್ರಖ್ಯಾತಿ ಪಡೆದ ಇವರು ಈಗ ಎಡಿಟಿಂಗ್ ಹಂತದಲ್ಲಿರುವ ನಂಬರ್ ಪ್ಲೇಟ್ ಚಲನಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಲ್ಲದೆ ಡ್ರಾಮಾ ಜೂನಿಯರ್ ಜೀ ಸರಿಗಮ ರಿಯಾಲಿಟಿ ಶೋ ಆಡಿಷನ್ ನಲ್ಲಿ ಬೆಂಗಳೂರು ನಲ್ಲಿ ಮೇಘಾ ಆಡಿಷನ್ ಹಂತದವರೆಗೆ ಆಯ್ಕೆ ಯಾಗಿದ್ದರು. ಅಲ್ಲದೆ ಗಾಯನ ಕ್ಷೇತ್ರದಲ್ಲಿ ಅಮೋಘ ಸಾಧನೆಯ ಹಾದಿಯಲ್ಲಿ ತಾಲೂಕು ಜಿಲ್ಲೆ ರಾಜ್ ಅಂತರಾಜ್ದಲ್ಲುೂ ಹೆಜ್ಜೆ ಗುರುತು ಮೂಡಿಸಿರುವ ಇವರು ತಮಿಳುನಾಡಿನ ಚೆನೈ,ಬೆಂಗಳೂರು, ಹುಬ್ಬಳ್ಳಿ,ಧಾರವಾದ ,ಚಿತ್ರದುರ್ಗ ,ಸೇರಿದಂತೆ ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಅದ್ಭುತ ಗಾಯನ ಪ್ರದರ್ಶನ ನೀಡಿರುತ್ತಾರೆ. ಸುಮಾರು 660 ಅಧಿಕ ವೇದಿಕೆಗಳಲ್ಲಿ ಗಾಯನ ಸಂಗೀತ ರಸದೌತನ ನೀಡುವ ಜೊತೆಗೆ ಅಂತರಾಷ್ಟ್ರೀಯ ಮಟ್ಟ ದ ಯೂನಿವರ್ಸಲ್ ಐಡಲ್ ಸ್ಪರ್ಧೆಯಲ್ಲಿ ಭಾರತದಲ್ಲಿ 7th ರಾಂಕ್ ಪಡೆದು ದುಬೈ ಸ್ಟುಡಿಯೋ ರೌಂಡ್ ಗೆ ಅರ್ಹತೆ ಪಡೆದಿರುತ್ತಾರೆ. ಕಲ್ಯಾಣ ಕರ್ನಾಟಕ ಕೋಗಿಲೆ ಗ್ರಾಂಡ್ ಫಿನಾಲೆಯಲ್ಲಿ ಅದ್ಭುತ ಪ್ರದರ್ಶನ ಪ್ರಖ್ಯಾತ ಹಿನ್ನಲೆ ಗಾಯಕಿ ಇಂದು ನಾಗರಾಜ್ಮ ತ್ತು ಸೆಲೆಬ್ರಿಟಿ ನಟ ತ್ರಿವಿಕ್ರಮ್ ಇವರಿಂದ ಪ್ರಸಂಶೆ ಪಡೆದು ರಾಜ್ಯದೆಲ್ಲೆಡೆ ಗುರುತಿಸಿ ಕೊಂಡಿದ್ದಾರೆ. ಕುಂದಾಪುರದಲ್ಲಿ ಗಾಯನ ಸ್ಪರ್ಧೆಯಲ್ಲಿ ಸರಿಗಮ ಖ್ಯಾತಿಯ ಕಂಬದ ರಂಗಯ್ಯ ಪೃಥ್ವಿ ಭಟ್ ಶಿವಾನಿ ವಿನುಷ್ ಭಾರದ್ವಾಜ್ ರಜತ್ ಖ್ಯಾತ ಗಾಯಕ ತೀರ್ಪುಗಾರರ ಮೆಚಿಗೆ ಪಡೆದು ಬಹುಮಾನ ಪಡೆದಿರುತ್ತಾರೆ.
ಆಲ್ದೇ ಕುಂದಾಪುರ ಭಟ್ಕಳ ವೇಣೂರು ಮಂಗಳೂರು ಬೆಂಗಳೂರು ಸೇರಿದಂತೆ ನೂರಾರು ಗಾಯನ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಸಂಗೀತ ವಿದ್ವಂಸರ ಮೆಚ್ಚುಗೆ ಪಡೆದು ಬಹುಮಾನ ಗಳನ್ವು ಪಡೆದಿರುತ್ತಾನೆ. ಅಲ್ಲದೆ ಯಕ್ಷಗಾನ ಭಾಗವತಿಕೆ ನೃತ್ಯ ಅಬ್ಯಾಸ ಮಾಡುತಿದ್ದಾರೆ .ಸುಗಮ ಸಂಗೀತ ವನ್ನು ಡಾ.ಕಿರಣ್ ಕುಮಾರ್ ಗಾನಸಿರಿ,ಜೀ ಸರಿಗಮಪ ಖ್ಯಾತಿಯ ಶ್ರೀ ಹರ್ಷ ಮೈಸೂರು ,ಶ್ರೀ ಲಕ್ಷ್ಮೀ ಪುತ್ತೂರು, ಅಶ್ವಿನಿ ಟಿ ಎನ್ ಬೆಂಗಳೂರು, ಹಾಗೂ ಕರ್ನಾಟಿಕ್ ಸಂಗೀತವನ್ನು ಕಾಂಚನ ಈಶ್ವರ ಭಟ್ ಇವರಲ್ಲು ರಂಗಾಭಿನಯ ಜೀವನ್ ರಾಮ್ ಸುಳ್ಯ, ಕೃಷ್ಣಪ್ಪ ಬಂಬಿಲ
ಕಲಿಯುತಿದ್ದು,
ಇವರು ಹಲವಾರು ಬಿರುದು ಸನ್ಮಾನಗಳಿಗೆ ಭಾಜನರಾಗಿದ್ದಾರೆ

1.ಅಮ್ಮ ಸೇವಾ. ಟ್ರಸ್ಟ್ ಸನ್ಮಾನ
2.ಗಡಿನಾಡ ರಾಜ್ಯೋತ್ಸವ
ಸನ್ಮಾ ನ
3.ಕಾಸರಗೋಡ್ ದಸರಾ ಸಾಧಕ
4.ಚಂದನ ಸಾಹಿತ್ಯ ವೇದಿಕೆ ಯಿಂದ ಕನ್ನಡ ಸಾಂಸ್ಕೃತಿಕ ರತ್ನ ಪುರಸ್ಕಾರ
5.ಗಡಿನಾಡ ಗಂಧರ್ವ ಗಾಯನ ಪುರಸ್ಕಾರ
6.ಕೆ ವಿ ಜಿ ಸುಳ್ಯ ಹಬ್ಬ ಸಾಧಕ ಸನ್ಮಾನ
7.ಕಯ್ಯಾರ ಕೋಗಿಲೆ ಬಿರುದು ಬಹುಮಾನ
8.2025 ರಲ್ಲಿ ಕರ್ನಾಟಕದ ಉನ್ನತ ಪುರಸ್ಕಾರ ಶಿವರಾಮ ಕಾರಂತ ಬಾಲ ಪ್ರಶಸ್ತಿ ಪಡೆದಿರುತ್ತಾರೆ.
ಇವರು ಶೈಕ್ಷಣಿಕ ಕ್ಷೇತ್ರದಲ್ಲಿ ಕಲಿಕೆ ಯಲ್ಲಿ ಮುಂಚೂಣಿ ಯಲ್ಲಿದ್ದು ಕಬಡ್ಡಿ ವಾಲಿಬಾಲ್ ಕ್ರೀಡೆಯಲ್ಲೂತನ್ನ ಚಾಪನ್ನು ಮೂಡಿಸಿರುವ ಇವರು ತನ್ನಂಥ ಪುಟ್ಟ ಮಕ್ಕಳಿಗೆ ನಮ್ಮ ಸಂಸ್ಕೃತಿಯನ್ನು ಬೆಳೆಸಬೇಕೆಂಬ ನಿಟ್ಟಿನಲ್ಲಿ ಅಶ್ವಿಜ್ ಇವರು ಶ್ರೀ ವೀರಾಂಜನೇಯ ಮಕ್ಕಳ ಭಜನಾ ತಂಡ ಸುಳ್ಯ ಒಂದು ಮಕ್ಕಳ ಭಜನಾ ತಂಡವನ್ನು ಮಾಡಿ ಎಲೆಮರೆಯ ಕಾಯಿಯಂತಿರುವ ಆಸಕ್ತ ಮಕ್ಕಳಿಗೆ ವೇದಿಕೆ ನೀಡುವ ಪ್ರೋತ್ಸಾಹ ತನ್ನ ಭಜನಾ ತಂಡವು ಅಂತರ್ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಹೆಗ್ಗಳಿಕೆ ಇವರ ತಂಡಕ್ಕೆ ಇದೆ. ಆಶ್ವಿಜ್ ಇವರ ಪ್ರತಿಭೆಗೆ ಇನ್ನೂ ಹೆಚ್ಚಿನ ಅವಕಾಶ ಪ್ರೋತ್ಸಾಹ.ದೊರೆತು ಉನ್ನತ ಯಶಸ್ಸು ಸಿಗಲಿ.

LEAVE A REPLY

Please enter your comment!
Please enter your name here