ಕರೆಂಕಿ; ಗಣೇಶ್ ಚತುರ್ಥಿ ನಿಮಿತ ಆಟೋಟ ಸ್ಪರ್ಧೆ-ನೂತನ ಸ್ವಾಗತ ಗೋಪುರದ ಶೀಲಾನ್ಯಾಸ

0
10

ಬಂಟ್ವಾಳ: ತಾಲೂಕಿನ ಮೂಡನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ಕರೆಂಕಿ ಇದರ ವತಿಯಿಂದ ಗಣೇಶ್ ಚತುರ್ಥಿ ನಿಮಿತ 18 ನೇ ವರ್ಷದ ಆಟೋಟ ಸ್ಪರ್ಧೆಗಳು ಹಾಗು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕರೆಂಕಿ ವತಿಯಿಂದ ನೂತನ ಸ್ವಾಗತ ಗೋಪುರದ ಶೀಲಾನ್ಯಾಸ ಸಮಾರಂಭ ಬುಧವಾರ ಕರೆಂಕಿ ದೇವಸ್ಥಾನದ ವಠಾರದಲ್ಲಿ ನಡೆಯಿತು

ಸ್ವಾಗತ ಗೋಪುರದ ಶೀಲಾನ್ಯಾಸ ವನ್ನು ಶ್ರೀ ಕ್ಷೇತ್ರದ ಅರ್ಚಕರಾದ ಗುರುರಾಜ್ ಭಟ್, ಸುದರ್ಶನ್ ಜೈನ ಪಂಜಿಕಲ್ಲ ಗುತ್ತು, ನಾಗೇಶ್ ಸಾಲ್ಯಾನ್ ಕಡಂಬಳಿಕೆ, ಹರೀಶ್ ಕೋಟ್ಯಾನ್ ಕುದನೆ, ಧರ್ನಪ್ಪ ಪೂಜಾರಿ ರಾಮನಗರ, ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಶೆಟ್ಟಿ ದಂಡೆ ಹಾಗು ಊರ ಹಿರಿಯರು ನೆರವೇರಿಸಿದರು. ಈ ನಿಮಿತ್ತ ಶ್ರೀ ಕ್ಷೇತ್ರದಲ್ಲಿ ಗಣಹೋಮ, ಅಪ್ಪದ ಪೂಜೆ ಜರಗಿತು. ನಂತರ
ಆಟೋಟ ಸ್ಪರ್ಧೆಗಳನ್ನು ದೀಪ ಪ್ರಜ್ವಲನೆಯ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಸ್ವಾಗತ ಗೋಪುರದ ಕೆಲಸ ಕಾರ್ಯಕ್ಕಾಗಿ ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಇದರ ಪದಾಧಿಕಾರಿಗಳು ದೇಣಿಗೆಯನ್ನು ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ನಾರಾಯಣ ಗೌಡ ಕರೆಂಕಿ, ಪಂಚಾಯತ್ ಸದಸ್ಯ ಪುವಪ್ಪ ಮೆಂಡನ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ವಿಠ್ಠಲ ಡಿ. ದೇವಿ ನಗರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here