ಕಾರ್ಕಳ ಕಾಂಗ್ರೆಸ್ ವತಿಯಿಂದ ರಾಹುಲ್ ಗಾಂಧಿ ಹುಟ್ಟುಹಬ್ಬದ ಆಚರಣೆ

0
65

ಆಶ್ರಮಕ್ಕೆ ಸಹಾಯಧನ, ಸಹಭೋಜನ, ಸಿಹಿತಿಂಡಿ ವಿತರಣೆ

ಕಾರ್ಕಳ : ವಿಧಾನಸಭಾ ಕ್ಷೇತ್ರಯುವ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಮುಖಂಡ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧೀಜಿಯವರ ಹುಟ್ಟು ಹಬ್ಬವನ್ನು ಕಾರ್ಕಳ ಜರಿಗುಡ್ಡೆ ಸುರಕ್ಷಾ ಆಶ್ರಮದಲ್ಲಿ ಧನ ಸಹಾಯ, ಸಹಬೋಜನ, ಮತ್ತು‌ ಸಿಹಿತಿಂಡಿ ವಿತರಿಸಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಮಾತನಾಡಿ ರಾಹುಲ್ ಗಾಂಧಿ ಭವಿಷ್ಯದಲ್ಲಿ ಭಾರತದ ಪ್ರಧಾನ ಮಂತ್ರಿಯಾಗಬೇಕು ಅವರಿಗೆ ದೇಶದ ಎಲ್ಲಾ ಸಮಸ್ಯೆಗಳ ಅರಿವಿದೆ, ರೈತರ ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು, ಮತ್ತು ಹಿಂದುಳಿದ ವರ್ಗಗಳ ಜನರ ಪರವಾದ ಧ್ವನಿ ಒಂದು ದಿನ ಅವರನ್ನು ದೇಶ ಪ್ರಧಾನಿಯನ್ನಾಗಿಸುತ್ತದೆ ಎಂದರು, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ಪ್ರಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಪಧಾದಿಕಾರಿಗಳಾದ ಅಭಿಷೇಕ್, ದೀಪಕ್ ಶೆಟ್ಟಿ ದೀಕ್ಷತ್ ಶೆಟ್ಟಿ, ಹೇಮಂತ್ ಆಚಾರ್ಯ, ವಿಶಾಕ್ ದೇವಾಡಿಗ, ಕೃಷ್ಟನ್ ಪಿಂಟೋ, ಪರ್ಧೀನ್ ಅಸಾದ್, ಸುನೀಲ್ ಕಡ್ತಲಾ, ಕೀರ್ತನ್ ದೇವಾಡಿಗ, ವಿಘೇಶ್ ಕುಲಾಲ್ ಮತ್ತಿತರರು‌ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here