ಬೇಲಾಡಿ ಬಂಗೇರ್ ಜಾಲ್ ಬೊಗ್ಗು ಮೂಲ್ಯರವರ ತರವಾಡು ಮನೆಯಲ್ಲಿ ಕಾಂತವರ ಕುಲಾಲ ಗ್ರಾಮ ಸಮಿತಿ ಮತ್ತು ಸರ್ವಜ್ಞ ಆಸರೆ ಬಳಗದ ಕೂಡುವಿಕೆಯೊಂದಿಗೆ , ತುಳುನಾಡ ಮೂಲ್ಯೆರ್ ಮಹಾಸಂಪುಟದ ಸಂಪಾದಕರಾದ ಮಹೇಶ್ ಕುಲಾಲ್ ಅರ್ತಿಮೂಲೆಯವರೊಂದಿಗೆ ಸಮಾಲೋಚನ ಸಭೆ-ಸನ್ಮಾನ ಸಮಾರಂಭ.
ದಿನಾಂಕ 24-12-2025 ರಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು ಕಾಂತಾವರ-ಬೇಲಾಡಿ ಗ್ರಾಮದ ದೈವಾರಾಧಕ ಮೊಗ್ಗು ಮೂಲ್ಯ ಬಂಗೇರ್ಜಾಲ್ ಇವರ ತರವಾಡು ಮನೆ ದೈವ ಸಾನಿಧ್ಯದಲ್ಲಿ ಕಾಂತವರ ಗ್ರಾಮದ ಕುಲಾಲ ಗ್ರಾಮ ಸಮಿತಿ ಹಾಗೂ ಸರ್ವಜ್ಞ ಆಸರೆ ಬಳಗ ಇದರ ಆಶ್ರಯದಲ್ಲಿ ತುಳುನಾಡ್ ಮೂಲ್ಯೆರ್ ಎಂಬ ಮಹಾ ಸಂಪುಟ ಕೃತಿಯನ್ನು ರಚಿಸುತ್ತಿರುವ ಮಹೇಶ್ ಕುಲಾಲ್ ಅರ್ತಿಮೂಲೆ ಇವರೊಂದಿಗೆ ಸಮಾಲೋಚನೆ ನಡೆಯಿತು. ಮತ್ತು ಗ್ರಾಮೀಣ ಸುತ್ತಮುತ್ತಲಿನ ಕುಲಾಲ ಸಮುದಾಯದ ಸಾಧನೆ ಹಾಗೂ ವಿಶೇಷತೆಗಳ ಮಾಹಿತಿಯನ್ನು ನೀಡುವ ಮೂಲಕ ಯಕ್ಷಗಾನ ಕಲಾವಿದ , ಸಾಹಿತಿ, ಲೇಖಕ ಮಹೇಶ್ ಕುಲಾಲ್ ಅರ್ತಿಮೂಲೆ ಇವರ ಸನ್ಮಾನಿಸಿ ಗೌರವಿಸಲಾಯಿತು .
ತರವಾಡು ಮನೆಯ ಯಜಮಾನರಾದ ಬೊಗ್ಗು ಮೂಲ್ಯ ದೈವರಾಧಕರು, ಕಾಂತವರ ಕುಲಾಲ ಸಂಘದ ಅಧ್ಯಕ್ಷರಾದ ವಿಠಲ ಮೂಲ್ಯ (ಉದ್ಯಮಿ) ಸರ್ವಜ್ಞ ಆಸರೆ ಬಳಗದ ಸಂಚಾಲಕರಾದ ಪ್ರಭಾಕರ್ ಇನ್ನಾ / SBI Life Chief Husiness Maneger ) ಕರಿಯ ಮೂಲ್ಯ ಅಡ್ಕರ್ಮರ್ ಬೆಳ್ಳಟಜ್ಜ ದೈವರಾಧಕರು, ಶಂಕರ ಮೂಲ್ಯ ಕರೆಯ ಲೆಕ್ಕಿಸಿರಿ ದೈವರಾಧಕರು , ಹೊನ್ನಯ ಮೂಲ್ಯ ದೈವರಾಧಕರು, ನಂದೇಶ್ ಕುಲಾಲ ದೈವರಾಧಕರು, ಜಗದೀಶ್ ಮೂಲ್ಯ ಬೇಲಾಡಿ , ಗ್ರಾಮ ಪಂಚಾಯತ್ ಉಪಧ್ಯಕ್ಷರಾದ ಪ್ರಭಾಕರ್ ಕುಲಾಲ, ಸಂಜೀವ ಮೂಲ್ಯ , ತುಳುಲಿಪಿ ಮಾಸ್ಟರ್ ಮತ್ತು ಸಿವಿಲ್ ಕಾಂಟ್ರಕ್ಟರ್ ಮಹೇಶ್ ಕುಲಾಲ್, ಜಯಂತಿ ಕುಲಾಲ್, ಸಂಗೀತ ಕುಲಾಲ್, ಚೈತ್ರ ಕುಲಾಲ್, ಪುಷ್ಟ ಕುಲಾಲ್, ಹರ್ಷಾ ಕುಲಾಲ್ ಕವಾಯಿತ್ರಿ ಮೊದಲಾದವರು ಉಪಸ್ಥಿತರಿದ್ದರು.
ತುಳುನಾಡ ಮೂಲ್ಯೆರ್ ಎಂಬ ವಿಶೇಷ ಪುಸ್ತಕ ಕರಾವಳಿಯಾಧ್ಯಂತ ನೆಲೆಸಿರುವ ಸಮೂದಾಯದ ನಾಗ ಮೂಲಸ್ಥಾನ ತರುವಾಡು ಪರಂಪರೆ. ದೈವ ಆರಾಧನೆ. ಗತ ಕಾಲದ ಆಚಾರ ವಿಚಾರ . ಸಾಂಸ್ಕ್ರತಿಕ ವಿಧಿ ವಿಧಾನಗಳನ್ನು ಮತ್ತು ವಿಶೇಷ ಸಾಧನೆಗೈದ ಪ್ರತಿಭಾನ್ವಿತ ಸಾಧಕರನ್ನು ಗುರುತಿಸುವ ಮತ್ತು ಮುಂದಿನ ಜನಾಂಗಕ್ಕೆ ದಾಖಲೆ ರೂಪದಲ್ಲಿ ನೋಡಲು ಸಮಸ್ತ ವಿವರದ ಕೈಪಿಡಿಯಾಗಿರುತ್ತದೆ .ಇದರ ಸಿದ್ದತೆಯನ್ನು ಯುವ ಸಾಹಿತಿ ಮಹೇಶ್ ಕುಲಾಲ್ ಆರ್ತಿಮೂಲೆಯವರು ಕೈಗೆತ್ತಿಕೊಂಡು ಭಾಗಶಃ ಮುಗಿಸಿರುತ್ತಾರೆ .ಆ ಪ್ರಯುಕ್ತ ಗ್ರಾಮ ಮಟ್ಟದಲ್ಲಿ ಮಾಹಿತಿ ಸಂಗ್ರಹವನ್ನು ಮಾಡುತ್ತಿರುವುದು ಸಂತೋಷದ ವಿಷಯ .ಆದ್ದರಿಂದ ಸ್ವಜಾತಿ ಭಾಂಧವರು ಈ ಒಂದು ಮಾಹಾತ್ವಾಕರ್ಯಕ್ಕೆ ಕೆಚ್ಚಿನ ರೀತಿಯಲ್ಲಿ ಗಮನವಿಟ್ಟು ಪ್ರತಿ ಗ್ರಾಮ ಗ್ರಾಮಗಳಲ್ಲಿ ಈ ಕಾರ್ಯಕ್ರಮವನ್ನು ನಡೆಸುವ ಮೂಲಕ ಸಮುದಾಯದ ಎಲ್ಲಾ ಜನರಿಗೆ ಸಮುದಾಯದ ವೈಶಿಷ್ಟ್ಯವನ್ನು ಮನೆ ಮನೆಗೆ ಮುಟ್ಟಿಸಬೇಕು, ಹಾಗೂ ಪ್ರತಿ ಗ್ರಾಮದ ಸಮುದಾಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ಅವರಿಗೆ ನೀಡಿ ಅವರನ್ನು ಸಮುದಾಯಕ್ಕೆ ವಿಶೇಷವಾಗಿ ಪರಿಚಯಿಸಿ ಸಮುದಾಯದ ಹಿರಿಮೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಬದ್ದರಾಗಬೇಕು ಸ್ವಜಾತಿ ಬಾಂಧವರಲ್ಲಿ ವಿನಂತಿ , ಕಾಂತವರ ಸಂಘ ಮತ್ತು ಸರ್ವಜ್ನ ಬಳಗದ ಆಶಯವಾಗಿದೆ .

